alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗನ ಖಾಯಿಲೆಗೆ ತತ್ತರಿಸಿದ ಉತ್ತರ ಕನ್ನಡ: ಮುಂಜಾಗ್ರತಾ ಕ್ರಮವೇನು ಗೊತ್ತಾ..?

IMG_0164

ವಾಸಿ ಮಾಡಲಾಗದ ಖಾಯಿಲೆ ಎಂದೇ ಕರೆಯಿಸಿಕೊಳ್ಳುವ ಮಂಗನ ಖಾಯಿಲೆ ಇದೀಗ ಉತ್ತರ ಕನ್ನಡದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಒಬ್ಬನನ್ನು ಬಲಿ ಪಡೆದಿರುವ ಮಾಹಿತಿ ಲಭ್ಯವಾಗಿದೆ.

ಹೊನ್ನಾವರದ ಅನಿಲ್‍ಗೋಡು, ಬಿಲಕುರಗಿ, ಕೊಂಡದಕುಳಿ, ಬೇರಂಕಿ, ಹಿನ್ನೂರು ಪ್ರದೇಶಗಳಲ್ಲಿ ಮಂಗನ ಖಾಯಿಲೆ ಕಾಣಿಸಿಕೊಂಡಿದ್ದು, ಮಂಗನಿಂದ ಮನುಷ್ಯನಿಗೆ ಸರಾಗವಾಗಿ ಹರಡುವ ಫ್ಲೇವಿ ವೈರಸ್‍ಗಳು ಕೊಂಡದ ಕುಳಿ ಗ್ರಾಮದ 54 ವರ್ಷದ ಮಹಿಳೆ ಗೌರಿ ಮೋಹನ ಬಾಗಿಲವೈದ್ಯ ಎಂಬುವವರನ್ನು ಬಲಿ ಪಡೆದಿದ್ದರೆ, ಗ್ರಾಮದ ಹಲವಷ್ಟು ಮಂದಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಏನಿದು ಮಂಗನ ಖಾಯಿಲೆ..?
1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಈ ರೋಗ ಪತ್ತೆಯಾಗಿದ್ದು, ಸಾಮಾನ್ಯವಾಗಿ ದಟ್ಟವಾದ ಅರಣ್ಯ ಪ್ರದೇಶಗಳಿರುವ ಭಾಗಗಳಲ್ಲಿ ಈ ಖಾಯಿಲೆ ಕಂಡು ಬರುತ್ತಿದ್ದು, ಕಾಡಿನಲ್ಲಿ ಫ್ಲೇವಿ ಎಂಬ ವೈರಾಣು ಉಣಗುಗಳ ಮೂಲಕ ಹರಡಿ ಮಂಗ, ಇಲಿ, ಅಳಿಲುಗಳಲ್ಲಿ ತನ್ನ ಸಂತತಿಯನ್ನು ಕಾಯ್ದಿರಿಸಿಕೊಂಡಿರುತ್ತದೆ. ಇನ್ನು ಇವುಗಳು ಸತ್ತ ನಂತರ ಗಾಳಿ ಮತ್ತು ಕೊಳೆತ ಚರ್ಮ, ಉಣ್ಣೆಗಳ ಮೂಲಕ ಮನುಷ್ಯನ ಸಂಪರ್ಕಕ್ಕೆ ಬಂದು ಆತನನ್ನು ಕೊಲ್ಲುತ್ತದೆ.

ಲಕ್ಷಣಗಳೇನು..?
ಫ್ಲೇವಿ ಎಂಬ ವೈರಸ್ ನಿಂದ ಹರಡುವ ಈ ಖಾಯಿಲೆಯನ್ನು ಗುಣಪಡಿಸಲು ಯಾವುದೇ ಔಷಧಗಳಿಲ್ಲ. ಸಾಮಾನ್ಯವಾಗಿ 20 ರಿಂದ 40 ರ ವಯೋಮಾನದವರು ಈ ಕಾಯಿಲೆಗೆ ತುತ್ತಾಗುತ್ತಾರೆ. ಅಲ್ಲದೇ ಈ ವೈರಸ್ ಬಾಧೆಗೆ ಒಳಗಾದ ವ್ಯಕ್ತಿಗೆ ತೀವ್ರವಾದ ಜ್ವರ, ತಲೆನೋವು, ಮೈ-ಕೈ ನೋವು, ದೇಹದ ಹಲವು ಭಾಗಗಳಲ್ಲಿ ರಕ್ತಸ್ರಾವ, ಮೆದುಳಿನ ಉರಿ ಊತ, ಕುತ್ತಿಗೆಯಲ್ಲಿ ಬಿಗಿಯುವಿಕೆ ಕಾಣಿಸಿಕೊಳ್ಳುತ್ತದೆ.

ಪರಿಹಾರ ಹೇಗೆ..?
ಫ್ಲೇವಿ ವೈರಸ್ ತಗುಲಿದ ನಂತರ ಆ ವ್ಯಕ್ತಿಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದ್ದು, ಆದರೂ ಸಹ ಖಾಯಿಲೆಯ ಲಕ್ಷಣ ಕಂಡು ಬಂದ ನಂತರ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಲ್ಲದೇ ನೈಸರ್ಗಿಕವಾಗಿ ಸಿಗುವ ಅಮೃತಬಳ್ಳಿಯ ಕಷಾಯವನ್ನು ಪ್ರತಿ ದಿನ ಸೇವಿಸುವುದರಿಂದ ಸಹ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ಈ ವೈರಸ್ ಬಾರದಂತೆ ತಡೆಯಲು ಸಹಕಾರಿಯಾಗುತ್ತದೆ. ಬಹು ಮುಖ್ಯವಾಗಿ ಅಕಾಲಿಕವಾಗಿ ಸಾವನ್ನಪ್ಪಿದ ಮಂಗಗಳು ಕಂಡು ಬಂದಲ್ಲಿ ತಕ್ಷಣ ಅದನ್ನು ಹೂಳುವುದರ ಮುಖೇನ ವೈರಸ್ ಹರಡದಂತೆ ಮಾಡುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...