alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಕ್ಕೇ ಅಪಾಯವಂತೆ ಚೈನೀಸ್ ಮೋಮೋಸ್..!

momos

ಮೋಮೋಸ್, ನೂಡಲ್ಸ್ ಸೇರಿದಂತೆ ಹಲವು ಬಗೆಯ ಚೈನೀಸ್ ತಿನಿಸುಗಳು ಭಾರತದಲ್ಲೂ ಫೇಮಸ್ ಆಗಿವೆ. ಯುವ ಜನತೆ ಚೀನಾದ ಖಾದ್ಯಗಳಿಗೆ ಮಾರು ಹೋಗ್ತಿದ್ದಾರೆ. ಆದ್ರೆ ರುಚಿಕರ ಮೋಮೋಸ್ ಆರೋಗ್ಯಕ್ಕೆ ಮಾರಕ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಮೋಮೋಸ್ ಗೆ ನಿಷೇಧ ಹೇರಬೇಕು ಅಂತಾ ಜಮ್ಮುವಿನ ಬಿಜೆಪಿ ಶಾಸಕ ರಮೇಶ್ ಅರೋರಾ ಒತ್ತಾಯಿಸಿದ್ದಾರೆ. ಮೋಮೋಸ್ ನಲ್ಲಿ ಬಳಸುವ ಅಜಿನೋಮೋಟೋ ಕರುಳಿನ ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ ಕೇವಲ ಜಮ್ಮು-ಕಾಶ್ಮೀರದಲ್ಲಿ ಮಾತ್ರವಲ್ಲ ಭಾರತದಲ್ಲೇ ಮೋಮೋಸ್ ಗೆ ನಿಷೇಧ ಹೇರಬೇಕು ಅಂತಾ ಶಾಸಕ ಆಗ್ರಹಿಸಿದ್ದಾರೆ.

ಕಳೆದ 5 ತಿಂಗಳಿನಿಂದ್ಲೂ ಶಾಸಕ ರಮೇಶ್ ಅರೋರಾ, ಮೋಮೋಸ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯತ್ನಿಸ್ತಿದ್ದಾರೆ. ಮೋಮೋಸ್ ನಿಷೇಧಕ್ಕಾಗಿ ಒತ್ತಡ ಹೇರುತ್ತಲೇ ಇದ್ದಾರೆ. ಜನರ ಜೀವಕ್ಕೆ ಮಾರಕವಾಗಬಲ್ಲ ಈ ತಿನಿಸನ್ನು ಸರ್ಕಾರ ಬಂದ್ ಮಾಡಬೇಕು ಅಂತಾ ಪಟ್ಟು ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...