alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದೆ ಆರೋಗ್ಯ ಇಲಾಖೆ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಟ್ವೀಟ್ ಒಂದು ವಿವಾದಕ್ಕೆ ಕಾರಣವಾಗಿದೆ. ಮಾಂಸಾಹಾರ, ಪ್ರೋಸೆಸ್ಡ್ ಫುಡ್ ಹಾಗೂ ಸಸ್ಯಾಹಾರ ಸೇವನೆಯ ಪರಿಣಾಮಗಳನ್ನು ಬಿಂಬಿಸುವ ಎರಡು ಚಿತ್ರಗಳನ್ನು ಇಲಾಖೆ ಪೋಸ್ಟ್ ಮಾಡಿತ್ತು.

ದಪ್ಪಗಿರುವ ಮಹಿಳೆ ಸಾಸೇಜ್, ಚಿಕನ್, ಮಾಂಸಭಕ್ಷ್ಯ, ಬರ್ಗರ್, ಡೋನಟ್, ಫ್ರೆಂಚ್ ಫ್ರೈಸ್, ಕೋಲಾ, ಅಲ್ಕೋಹಾಲ್ ಸೇವಿಸಿದ್ದಾಳೆಂದು ಬಿಂಬಿಸಲಾಗಿತ್ತು. ತೆಳ್ಳಗಿರುವ ಮಹಿಳೆ ಹಣ್ಣು, ಹಸಿರು ತರಕಾರಿ ಸೇವನೆಯಿಂದ ಆರೋಗ್ಯವಾಗಿದ್ದಾಳೆಂದು ಬಿಂಬಿಸಲಾಗಿತ್ತು.

ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವಾಲಯ ಈ ಟ್ವೀಟ್ ಮೂಲಕ ಬಾಡಿ ಶೇಮಿಂಗ್ ಮಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಸಸ್ಯಾಹಾರವಾದವನ್ನು ಮಂಡಿಸಿದೆ ಅಂತಾ ಹಲವರು ಕಿಡಿಕಾರಿದ್ದಾರೆ.

ಮಾಂಸಾಹಾರ ಹಾಗೂ ಮೊಟ್ಟೆಯಂತಹ ಪದಾರ್ಥಗಳು ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವನ್ನೆಲ್ಲ ಬೊಜ್ಜಿನ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...