alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಲ್ಕತ್ತಾದಲ್ಲಿ ಜನಿಸಿದೆ ಮತ್ಸ್ಯಕನ್ಯೆಯಂತಹ ಮಗು…!

ಪಶ್ಚಿಮ ಬಂಗಾಳದಲ್ಲಿ ಮತ್ಸ್ಯ ಕನ್ಯೆಯಂತಹ ಮಗುವೊಂದು ಜನಿಸಿತ್ತು. ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ 23 ವರ್ಷದ ಮಹಿಳೆಗೆ ಹೆರಿಗೆಯಾಗಿದ್ದು, ಮಗು ಜನಿಸಿ 4 ಗಂಟೆಗಳ ಬಳಿಕ ಮೃತಪಟ್ಟಿದೆ. ಈ ರೀತಿ ಅಂಗಾಂಗ ಊನ ಹೊಂದಿರುವ ಖಾಯಿಲೆಗೆ ಸಿರೆನೋಮೆಲಿಯಾ ಎಂದು ಕರೆಯಲಾಗುತ್ತದೆ.

ಮಗುವಿನ ಪೆಲ್ವಿಸ್ ಹಾಗೂ ಕಾಲುಗಳೆಲ್ಲ ಪರಸ್ಪರ ಕೂಡಿಕೊಂಡ ಸ್ಥಿತಿಯಲ್ಲಿದ್ದಿದ್ದರಿಂದ ಗಂಡೋ ಹೆಣ್ಣೋ ಅನ್ನೋದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪೋಷಕಾಂಶಗಳ ಕೊರತೆ ಹಾಗೂ ತಾಯಿಯ ದೇಹದಲ್ಲಿ ಸರಿಯಾಗಿ ರಕ್ತಪರಿಚಲನೆ ಆಗದಿರುವುದರಿಂದ ಮಗು ಈ ರೀತಿ ಜನಿಸಿದೆ ಅಂತಾ ವೈದ್ಯರು ತಿಳಿಸಿದ್ದಾರೆ.

ಭಾರತದಲ್ಲಿ ಮತ್ಸ್ಯಕನ್ಯೆಯಂತಹ ಮಗು ಜನಿಸಿರುವುದು ಇದು ಎರಡನೇ ಬಾರಿ. 2016ರಲ್ಲಿ ಉತ್ತರ ಪ್ರದೇಶದಲ್ಲಿ ಇಂಥದ್ದೇ ಮಗು ಜನಿಸಿತ್ತು, ಆದ್ರೆ ಕೇವಲ ಹತ್ತು ನಿಮಿಷಗಳಲ್ಲೇ ಕೊನೆಯುಸಿರೆಳೆದಿತ್ತು.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...