alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ನೋವು ಹೇಳುತ್ತೆ ಹೆರಿಗೆ ನೋವಿನ ಪ್ರಮಾಣ

periods_1493900416_749x421

ಮುಟ್ಟಿನ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯ ನೋವು ಭಿನ್ನವಾಗಿರುತ್ತದೆ. ಕೆಲವರಿಗೆ ಹೆಚ್ಚಿಗೆ ನೋವಾದ್ರೆ ಮತ್ತೆ ಕೆಲವರ ನೋವಿನ ಪ್ರಮಾಣ ಕಡಿಮೆ. ಬಹುತೇಕ ಮಹಿಳೆಯರು ಇದನ್ನು ನರಕದ ದಿನ ಎನ್ನುತ್ತಾರೆ. ಆದ್ರೆ ಈ ಕ್ರಿಯೆ ಭವಿಷ್ಯದಲ್ಲಿ ಬರುವ ಇನ್ನೊಂದು ಮಹತ್ವದ ಕ್ರಿಯೆಗೆ ಮಹಿಳೆಯರನ್ನು ಗಟ್ಟಿಗೊಳಿಸುತ್ತದೆ. ಹೆರಿಗೆ ವೇಳೆ ಬರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಇದು ನೀಡುತ್ತದೆ.

ಆಸ್ಟ್ರೇಲಿಯನ್ ವುಮೆನ್ ವೆಬ್ ಸೈಟ್ ಒಂದರಲ್ಲಿ ಬಂದ ಮಾಹಿತಿ ಪ್ರಕಾರ ಮಹಿಳೆ ಮುಟ್ಟಿನ ನೋವಿನ ಮೂಲಕ ಆಕೆಯ ಹೆರಿಗೆ ನೋವನ್ನು ಊಹಿಸಬಹುದಂತೆ. ವೈದ್ಯರೊಬ್ಬರ ಹೇಳಿಕೆ ಪ್ರಕಾರ ಆರಂಭದಲ್ಲಿ ಹೆರಿಗೆ ಹಾಗೂ ಮುಟ್ಟಿನ ನೋವು ಒಂದೇ ರೀತಿಯಲ್ಲಿರುತ್ತದೆ. ಮುಟ್ಟಿನ ದಿನಗಳಲ್ಲಿ ನೋವು ಒಂದೇ ರೀತಿ ಇರುತ್ತದೆ. ಆದ್ರೆ ಹೆರಿಗೆ ಸಮಯದಲ್ಲಿ ನೋವು ಜಾಸ್ತಿಯಾಗುತ್ತಾ ಹೋಗುತ್ತದೆ. ಇದು ಮಾತ್ರ ಹೆರಿಗೆ ಹಾಗೂ ಮುಟ್ಟಿನ ನೋವಿಗಿರುವ ವ್ಯತ್ಯಾಸ ಎಂದಿದ್ದಾರೆ ವೈದ್ಯರು.

ಮುಟ್ಟಿನ ಸಮಯದಲ್ಲಿ ಗರ್ಭಕೋಶದ ಬಾಯಿ 1 ಸೆಂಟಿಮೀಟರ್ ನಷ್ಟು ತೆರೆಯುತ್ತದೆ. ಹೆರಿಗೆ ಸಮಯದಲ್ಲಿ 10 ಸೆಂಟಿಮೀಟರ್ ನಷ್ಟು ತೆರೆಯುತ್ತದೆ. ಇದ್ರಿಂದ ಮಗು ಹೊರಬರಲು ಸಾಧ್ಯವಾಗುತ್ತದೆ.

ಮುಟ್ಟಿನ ವೇಳೆ ಕಡಿಮೆ ನೋವು ತಿನ್ನುವ ಮಹಿಳೆಯರು ಈ ವಿಷಯ ತಿಳಿದು ಖುಷಿಯಾಗ್ತಾರೆ. ಯಾಕೆಂದ್ರೆ ಮುಟ್ಟಿನ ವೇಳೆ ಕಡಿಮೆ ನೋವು ತಿನ್ನುವವರಿಗೆ ಹೆರಿಗೆ ವೇಳೆಯೂ ಅತಿ ನೋವು ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಮುಟ್ಟಿನ ವೇಳೆ ಅತಿಯಾಗಿ ನೋವುಣ್ಣುವವರಿಗೆ ಹೆರಿಗೆ ಸಮಯದಲ್ಲೂ ಈ ನೋವು ತಪ್ಪಿದ್ದಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...