alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ….ಪುರುಷರಿಗೂ ಬರುತ್ತೆ ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಮಾತ್ರ ಬರುತ್ತೆ ಎಂಬ ಭಾವನೆ ತಪ್ಪು. ಪುರುಷರನ್ನೂ ಸ್ತನ ಕ್ಯಾನ್ಸರ್ ಆವರಿಸಿಕೊಳ್ಳಬಹುದು. ಇದಕ್ಕೆ ನಿದರ್ಶನ ಸಂಜಯ್ ಗೋಯೆಲ್. 24 ವರ್ಷದವರಿದ್ದಾಗ್ಲೇ ಸಂಜಯ್ ಗೆ ಸ್ತನ ಕ್ಯಾನ್ಸರ್ ಬಂದಿತ್ತು. ಆದ್ರೆ ಅವರಿಗೆ ಅದು ಗೊತ್ತಾಗಿದ್ದು 30 ವರ್ಷದವರಿದ್ದಾಗ.

ಸಂಜಯ್ ದಪ್ಪಗಿದ್ರು, ಹಾಗಾಗಿ ಸ್ತನಗಳು ಹಿಗ್ಗಿದ್ದರೂ ಅವರಿಗೆ ಅಸಹಜ ಎನಿಸಲಿಲ್ಲ. ಸ್ವಲ್ಪ ಸಮಯದ ಬಳಿಕ ಬಲಭಾಗದ ಸ್ತನದಿಂದ ಡಿಸ್ಚಾರ್ಜ್ ಶುರುವಾಗಿತ್ತು. ಆಗಲೂ ಸಂಜಯ್ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಂತರ ಸ್ತನದಲ್ಲಿ ಚಿಕ್ಕ ಗಡ್ಡೆಯಂತಾಗಿತ್ತು.

ಅದಾದ್ಮೇಲೆ ರಕ್ತ ಸ್ರವಿಸಲಾರಂಭಿಸಿತ್ತು. ಆಗ ಸಂಜಯ್ ಗಾಬರಿ ಬಿದ್ದು ವೈದ್ಯರ ಬಳಿ ತೆರಳಿದ್ರು. ವೈದ್ಯರಿಗೆ ಕೂಡ ಅದು ಸ್ತನ ಕ್ಯಾನ್ಸರ್ ಇರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಆ್ಯಂಟಿಬಯೋಟಿಕ್ಸ್ ಕೊಟ್ಟು ಕಳಿಸಿದ್ದಾರೆ. ಅದರಿಂದ ರಕ್ತಸ್ರಾವವೂ ನಿಂತಿತ್ತು. ಆದ್ರೆ ಒಂದು ವರ್ಷದ ಬಳಿಕ ಮತ್ತದೇ ಸಮಸ್ಯೆ ಶುರುವಾಗಿದೆ.

ಆಗ ಸ್ತನಗಳಲ್ಲಿ ನೋವು ಸಹ ಇತ್ತು. ಸಂಜಯ್ ತನ್ನ ಸ್ನೇಹಿತರೇ ಆಗಿದ್ದ ತಜ್ಞ ವೈದ್ಯರನ್ನು ಸಂಪರ್ಕಿಸಿದ್ರು. ಕೂಲಂಕುಷ ಪರೀಕ್ಷೆ ನಡೆಸಿದಾಗ ಸಂಜಯ್ ಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಅದಾಗ್ಲೇ ಕ್ಯಾನ್ಸರ್ ಎರಡನೇ ಹಂತಕ್ಕೆ ತಲುಪಿತ್ತು. ನಂತರ ಸಂಜಯ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಸಂಜಯ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಸ್ತನ ಕ್ಯಾನ್ಸರ್ ಬಗ್ಗೆ ಹೇಳಿಕೊಳ್ಳಲು ಪುರುಷರು ಹಿಂಜರಿಯುತ್ತಾರೆ. ಆದ್ರೆ ಮುಜುಗರಪಡುವ ಅಗತ್ಯವಿಲ್ಲ. ಕುಟುಂಬದಲ್ಲಿ ಯಾವುದೇ ಮಹಿಳೆಗೆ ಸ್ತನ ಕ್ಯಾನ್ಸರ್ ಬಂದಿದ್ದರೆ ತಪ್ಪದೇ ನೀವು ಕೂಡ ಪರೀಕ್ಷೆ ಮಾಡಿಸಿಕೊಳ್ಳಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...