alex Certify
ಕನ್ನಡ ದುನಿಯಾ       Mobile App
       

Kannada Duniya

6 ಬಾರಿ ಹೃದಯಾಘಾತವಾದ್ರೂ ಸಾವು ಗೆದ್ದ ಕಂದಮ್ಮ

593531-baby

ಹುಟ್ಟುವಾಗ್ಲೇ ತೀವ್ರ ಹೃದಯದ ತೊಂದರೆಯಿಂದ ಬಳಲುತ್ತಿದ್ದ ಮಗುವೊಂದು 12 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಬದುಕುಳಿದಿದೆ. 6 ಬಾರಿ ನವಜಾತ ಶಿಶುವಿಗೆ ಹೃದಯಾಘಾತವಾಗಿದ್ದು, ಚಮತ್ಕಾರದ ರೀತಿಯಲ್ಲಿ ಸಾವನ್ನು ಗೆದ್ದು ಬಂದಿದೆ. 45 ದಿನಗಳಾಗಿದ್ದಾಗ ಮಗು, ತಾಯಿಯ ಹಾಲು ಕುಡಿದ ಮರುಕ್ಷಣವೇ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿತ್ತು.

ಮಗುವನ್ನು ಎಚ್ಚರಿಸಿದ್ರೂ ಪದೇ ಪದೇ ಪ್ರಜ್ಞೆ ತಪ್ಪುತ್ತಿತ್ತು. ನಂತರ ಹೆಣ್ಣು ಮಗುವನ್ನು ಮುಂಬೈನ ಬಿಜೆ ವಾಡಿಯಾ ಆಸ್ಪತ್ರೆಗೆ ಕರೆತರಲಾಯ್ತು. ಮಗುವನ್ನು ಪರೀಕ್ಷಿಸಿದ ವೈದ್ಯರು ಹೃದಯದ ತೊಂದರೆ ಇರುವುದಾಗಿ ಪತ್ತೆ ಮಾಡಿದ್ದಾರೆ. ಡಾ.ಬಿಸ್ವಾ ಪಂಡಾ ಎಂಬ ತಜ್ಞ ವೈದ್ಯರು ಮಗುವಿಗೆ 12 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಸರ್ಜರಿ ಬಳಿಕ 51 ದಿನಗಳ ಕಾಲ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ 6 ಬಾರಿ ಮಗುವಿಗೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದೆ. ಮಗುವಿನ ಚಿಕಿತ್ಸೆಗೆ 5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು ಆಸ್ಪತ್ರೆಯ ಶುಲ್ಕ ಕಟ್ಟಲು ನೆರವಾಗಿದ್ದಾರೆ. ವಿಧಿದಾಗೆ ಈಗ ನಾಲ್ಕು ತಿಂಗಳು, ಪುಟಾಣಿ ಸಾಕಷ್ಟು ಚೇತರಿಸಿಕೊಂಡಿದ್ದಾಳೆ. ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...