alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಜೆಕ್ಷನ್ ರೂಪದಲ್ಲಿ ಲಭ್ಯವಿದೆ ಗರ್ಭ ನಿರೋಧಕ

inject

ಭಾರತದಲ್ಲಿ ಇದೇ ಮೊದಲ ಬಾರಿಗೆ ಚುಚ್ಚುಮದ್ದಿನ ರೂಪದಲ್ಲಿ ಗರ್ಭನಿರೋಧಕವನ್ನು ಪರಿಚಯಿಸಲಾಗುತ್ತಿದೆ. ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಈ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಅಂತರ ಎಂಬ ಯೋಜನೆ ಅಡಿಯಲ್ಲಿ ಒಟ್ಟು 33,000 ಡೋಸ್ ಇಂಜೆಕ್ಷನ್ ಅನ್ನು ಸಂಗ್ರಹಿಸಲಾಗಿದೆ.

ಪುಣೆ, ಮುಂಬೈ, ರಾಯ್ಗಡ, ನಂದುರ್ಬಾರ್, ಅಹ್ಮದ್ ನಗರ, ಔರಂಗಾಬಾದ್, ಕೊಲ್ಹಾಪುರ, ಸಾಂಗ್ಲಿ, ರತ್ನಗಿರಿ ಮತ್ತು ಬೀಡ್ ನಲ್ಲಿ ಈ ಇಂಜೆಕ್ಷನ್ ಲಭ್ಯವಿದೆ. 23 ಜಿಲ್ಲಾಸ್ಪತ್ರೆಗಳು, 20 ಮೆಡಿಕಲ್ ಕಾಲೇಜುಗಳು ಮತ್ತು 12 ಮಹಿಳಾ ಆಸ್ಪತ್ರೆಗಳಲ್ಲಿ ಈ ಚುಚ್ಚುಮದ್ದನ್ನು ನೀಡಲಾಗುತ್ತದೆ. ಮೆಟರ್ನಿಟಿ ಹೋಮ್ ಮತ್ತು ಸರ್ಕಾರಿ ಆಸ್ಪತ್ರೆಗಳಿಗಾಗಿ ಬಿಎಂಸಿ 10,000 ಡೋಸ್ ಗಳನ್ನು ಕಾಯ್ದಿರಿಸಿದೆ.

18-45 ವರ್ಷದೊಳಗಿನ ಮಹಿಳೆಯರಿಗೆ ಈ ಇಂಜೆಕ್ಷನ್ ಕೊಡಲಾಗುತ್ತದೆ. ಒಮ್ಮೆ ಇಂಜೆಕ್ಷನ್ ತೆಗೆದುಕೊಂಡರೆ 3 ತಿಂಗಳವರೆಗೂ ಮಹಿಳೆ ಗರ್ಭ ಧರಿಸುವುದಿಲ್ಲ. ಇಂಜೆಕ್ಷನ್ ನಿಲ್ಲಿಸಿ 7 ತಿಂಗಳ ಬಳಿಕ ಗರ್ಭಧರಿಸಲು ಅವಕಾಶವಿದೆ. ಈ ಇಂಜೆಕ್ಷನ್ ನಿಂದ ಅನಿಯಮಿತ ಋತುಸ್ರಾವ, ಅಮಿನೋನೇರಿಯಾ, ಕಡಿಮೆ ರಕ್ತಸ್ರಾವದಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.

ಆದ್ರೆ ಮಕ್ಕಳ ಮಧ್ಯೆ ಅಂತರ ಕಾಯ್ದುಕೊಳ್ಳಲು ಈ ಇಂಜೆಕ್ಷನ್ ಅತ್ಯಂತ ಪ್ರಯೋಜನಕಾರಿ ಎನ್ನುತ್ತಾರೆ ವೈದ್ಯರು. ಒಂದು ವಾರದ ಕಾಲ ಚುಚ್ಚುಮದ್ದು ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಉಚಿತವಾಗಿ ಇಂಜೆಕ್ಷನ್ ಹಾಕಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...