alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಗ್ಯವಂತ ಶ್ವಾಸಕೋಶ V/S ಧೂಮಪಾನಿಗಳ ಶ್ವಾಸಕೋಶ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನೋ ವಿಷಯ ಎಲ್ಲರಿಗೂ ಗೊತ್ತಿರೋದೇ. ಆದರೆ ಇದು ಗೊತ್ತಿದ್ದೂ ಅನೇಕರಿಗೆ ಇದನ್ನು ಬಿಡೋಕೆ ಸಾಧ್ಯವಾಗೋದಿಲ್ಲ. ಆದರೆ ನೀವು ಧೂಮಪಾನ ಮಾಡಿದ ಹಾಗೂ ಮಾಡದೇ ಹೋದ ಶ್ವಾಸಕೋಶಗಳ ವಿಡಿಯೋ ನೋಡಿದ್ರೆ ಖಂಡಿತಾ ಧೂಮಪಾನವನ್ನು ಬಿಟ್ಟೇ ಬಿಡ್ತೀರಿ.

ಹೌದು….ಉತ್ತರ ಕೆರೋಲಿನಾದ ನರ್ಸ್ ಅಮಂಡಾ ಎಲ್ಲೆರ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಧೂಮಪಾನ ಮಾಡಿ ರೋಗಗ್ರಸ್ಥವಾಗಿರೋ ಶ್ವಾಸಕೋಶ ಗಾಳಿಯನ್ನು ಪಂಪ್ ಮಾಡೋದು ಹಾಗೂ ಆರೋಗ್ಯವಂತ ಶ್ವಾಸಕೋಶ ಗಾಳಿಯನ್ನು ಪಂಪ್ ಮಾಡೋದರ ವ್ಯತ್ಯಾಸವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.

ವಿಡಿಯೋದ ಕೊನೆಯಲ್ಲಿ ಪ್ರತಿದಿನ ಒಂದು ಪ್ಯಾಕ್ ನಂತೆ 20 ವರ್ಷ ಧೂಮಪಾನ ಮಾಡಿದ ಶ್ವಾಸಕೋಶ ವರ್ಸಸ್ ಆರೋಗ್ಯವಂತ ಶ್ವಾಸಕೋಶ. ಇನ್ನೂ ಧೂಮಪಾನ ಮಾಡಲು ಬಯಸುತ್ತೀರಾ ಎಂಬ ಕ್ಯಾಪ್ಶನ್ ಇದೆ. ಈ ವಿಡಿಯೋ 5 ಲಕ್ಷ ಜನರಿಂದ ಶೇರ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...