alex Certify ಚಮಚ ಇಲ್ಲದೆ ಕೈನಲ್ಲೇ ಊಟ ಮಾಡುವುದರಿಂದ ಇದೆ ಹಲವು ʼಪ್ರಯೋಜನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಮಚ ಇಲ್ಲದೆ ಕೈನಲ್ಲೇ ಊಟ ಮಾಡುವುದರಿಂದ ಇದೆ ಹಲವು ʼಪ್ರಯೋಜನʼ

ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮೊರೆ ಹೋಗ್ತಿದ್ದಾರೆ. ನಮ್ಮ ಹಳೆಯ ಆಚಾರ ವಿಚಾರ ಪಾಲಿಸಿದ್ರೆ ಎಲ್ಲಿ ಮುಜುಗರವಾಗತ್ತೋ ಅನ್ನೋ ಚಿಂತೆ ಅವರಿಗೆ. ಆದ್ರೆ ನಮ್ಮ ಹಿರಿಯರಿಂದ ಬಂದ ಪ್ರತಿ ಆಚರಣೆಯ ಹಿಂದೆ ಕೂಡ ಸಕಾರಣ, ಪ್ರಯೋಜನ ಎರಡೂ ಇದೆ.

ಈಗೆಲ್ಲಾ ಬಾಳೆ ಎಲೆ ಮಾಯವಾಗಿದೆ, ಬಗೆ ಬಗೆಯ ಪಿಂಗಾಣಿ ಬಟ್ಟಲು, ಪೋರ್ಕ್, ಸ್ಪೂನ್, ಸ್ಟಿಕ್ ಹೀಗೆ ಎಲ್ಲವೂ ಸ್ಟೈಲಿಶ್. ಬಾಳೆ ಎಲೆಯಲ್ಲಿ ಕೈಯಿಂದ ಊಟ ಮಾಡುವವರು ಬಹಳ ಅಪರೂಪ. ಪುರಾತನ ಕಾಲದಿಂದ್ಲೂ ಬಾಳೆ ಎಲೆಯಲ್ಲಿ ಊಟ ಮಾಡುವ ಸಂಪ್ರದಾಯವಿರೋದಕ್ಕೆ ಕಾರಣವಿದೆ, ಕೈಯಿಂದ್ಲೇ ಊಟ ಮಾಡುವುದರ ಹಿಂದೆ ಕೂಡ ಲಾಜಿಕ್ ಇದೆ.

ಕೈಯಿಂದ ಊಟ ಮಾಡುವುದು ಒಂದು ಆಯುರ್ವೇದದ ಟೆಕ್ನಿಕ್. ಪ್ರತಿ ಬೆರಳು ಕೂಡ ಒಂದೊಂದರ ಸಂಕೇತ (ಗಾಳಿ, ನೀರು, ಆಕಾಶ, ಭೂಮಿ, ಬೆಂಕಿ). ಊಟದ ತುತ್ತು ತೆಗೆದುಕೊಳ್ಳಲು ಐದು ಬೆರಳುಗಳನ್ನು ಒಟ್ಟಿಗೆ ತಂದಾಗ ಆಹಾರದಲ್ಲಿ ರೂಪಾಂತರವಾಗುತ್ತದೆ. ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಈ ಐದು ಬೆರಳುಗಳು ಜೀರ್ಣ ದ್ರವಗಳನ್ನು ಮುಂದಕ್ಕೆ ತರುವಲ್ಲಿ ಸಹಕಾರಿ.

ಊಟ ಮಾಡಲು ಐದು ಬೆರಳುಗಳನ್ನು ಒಗ್ಗೂಡಿಸಿದಾಗ ಅದು ಕೂಡ ಒಂದು ರೀತಿಯ ಮುದ್ರಾ. ಧ್ಯಾನದ ಸಮಯದಲ್ಲಿ ಆ ಮುದ್ರಾವನ್ನು ಹಾಕಲಾಗುತ್ತದೆ. ಕಥಕ್ ಹಾಗೂ ಭರತನಾಟ್ಯದಲ್ಲೂ ಇಂತಹ ಮುದ್ರೆಯನ್ನು ಕಾಣಬಹುದು. ನಮ್ಮ ಬೆರಳ ತುದಿಯಲ್ಲಿ ಲಕ್ಷ್ಮಿ, ಹಸ್ತದ ಮೇಲೆ ಸರಸ್ವತಿ, ಮಧ್ಯದಲ್ಲಿ ಭಗವಂತನಾದ ಗೋವಿಂದ ಕುಳಿತಿರುತ್ತಾನೆಂಬ ನಂಬಿಕೆಯಿದೆ. ಕೈಯಿಂದ ಊಟಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದು ಮಾತ್ರವಲ್ಲ, ನೀವು ತಿನ್ನುವ ಆಹಾರದ ವಾಸನೆ, ಉಷ್ಣಾಂಶ, ರುಚಿ ಎಲ್ಲವನ್ನೂ ಚೆನ್ನಾಗಿ ಆಸ್ವಾದಿಸಬಹುದು. ಜೊತೆಗೆ ನೀವು ಎಷ್ಟು ತಿಂದಿದ್ದೀರಾ ಎಂಬುದರ ಅಂದಾಜು ಕೂಡ ಸಿಗುತ್ತದೆ. ಹಾಗಾಗಿ ಚಮಚದ ಸಹವಾಸ ಬಿಡಿ, ಕೈಯಿಂದ್ಲೇ ಊಟ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...