alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಾರಿಕೆ ತಣಿಸಲು ರುಚಿಕರ ಬಂಗಾಳಿ ಲೆಮೊನೇಡ್

Limeade

ದಿನೇ ದಿನೆ ಬೇಸಿಗೆಯ ಉರಿ ಹೆಚ್ಚುತ್ತಿದೆ. ಏನೇ ಕುಡಿದರೂ ಬಾಯಾರಿಕೆ ತಣಿಯದು. ಬಿಸಿಲಿನ ತಾಪಕ್ಕೆ ದೇಹದಲ್ಲಿ ತ್ರಾಣವೇ ಇಲ್ಲವೆನಿಸುತ್ತಿದೆ. ಒಣಗಿದ ಗಂಟಲಿಗೆ ಏನಾದರೂ ಕುಡಿದು ತಂಪು ಮಾಡಿದರೆ ದೇಹದಲ್ಲಿ ಒಂದಷ್ಟು ಉತ್ಸಾಹ ಹೆಚ್ಚುತ್ತದೆ. ಅದರಲ್ಲಿಯೂ ನೈಸರ್ಗಿಕವಾಗಿ ತಯಾರಿಸಿದ ಪಾನೀಯ ಅರೋಗ್ಯಕ್ಕೆ ಹಿತ ನೀಡುವ ಜತೆಗೆ ಬಾಯಾರಿಕೆಯನ್ನೂ ಕಡಿಮೆ ಮಾಡುತ್ತದೆ.

ಅಲ್ಲದೇ ಪ್ರತಿಬಾರಿಯೂ ಹೊರಗಡೆಯ ತಂಪು ಪಾನೀಯಗಳನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ನಕಲಿ ಪಾನೀಯಗಳಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಮನೆಯಲ್ಲಿಯೇ ಪಾನೀಯಗಳನ್ನು ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಹಿತ. ಸರಳವಾದ ಹಾಗೂ ದೇಹಕ್ಕೆ ಉತ್ಸಾಹ ನೀಡುವ ಲೆಮೊನೇಡ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ನೀರು, ಸೋಸಿದ ನಿಂಬೆ ಹಣ್ಣಿನ ರಸ, ಉಪ್ಪು, ಸಕ್ಕರೆ, ಪುದೀನ ಎಲೆ, ಐಸ್

ಮಾಡುವ ವಿಧಾನ:
ನೀರಿಗೆ ನಿಂಬೆರಸ, ಚಿಟಿಕೆ ಉಪ್ಪು ಮತ್ತು ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ಎರಡು ಐಸ್ ಪೀಸ್ ಗಳನ್ನು ಮತ್ತು ಪುದೀನಾ ಎಲೆಗಳನ್ನು ಹಾಕಿ. ನಿಂಬೆಹಣ್ಣಿನ ತೆಳುವಾದ (ಕಾಗದದಷ್ಟು ತೆಳುವಾದ) ಎರಡು ಸ್ಲೈಸ್ ಗಳನ್ನು ಹಾಕಿ. ಐದು ನಿಮಿಷಗಳ ನಂತರ ಲೆಮೊನೇಡ್ ಪಾನೀಯವನ್ನು ಸೇವಿಸಿ. ರುಚಿಕರ ಲೆಮೊನೇಡ್ ಆರೋಗ್ಯಕ್ಕೆ ಹಿತ ಹಾಗೂ ದೇಹಕ್ಕೆ ಉಲ್ಲಾಸ ನೀಡುತ್ತದೆ. ಎರಡು ದಿನಕ್ಕೊಮ್ಮೆ ಇದನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...