alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಕುಮ ಹಚ್ಚಿಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ….

ಭಾರತೀಯ ಸಂಪ್ರದಾಯದ ಪ್ರತೀಕವಾಗಿರೋ ಸಿಂಧೂರ ಮಹಿಳೆಯರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಅಮೆರಿಕ ಮತ್ತು ಭಾರತದಲ್ಲಿ ಮಾರಾಟವಾಗ್ತಿರೋ ಸಿಂಧೂರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸೀಸ ಇದೆ ಅಂತಾ ಸಂಶೋಧಕರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಭಾರತದಲ್ಲಿ ನಡೆಯೋ ಪ್ರತಿಯೊಂದು ಧಾರ್ಮಿಕ ಸಮಾರಂಭದಲ್ಲೂ ಕುಂಕುಮವನ್ನು ಬಳಸಲಾಗುತ್ತದೆ. ಗೃಹಿಣಿಯರು ಬಿಂದಿ ಇಟ್ಟುಕೊಂಡಿದ್ರೂ, ಮುತ್ತೈದೆತನದ ಪ್ರತೀಕವಾಗಿ ಹಣೆ ಮೇಲೆ ಕುಂಕುಮ ಹಚ್ಚಿಕೊಳ್ತಾರೆ. ಈ ಸಿಂಧೂರ ವಿವಾಹಿತರ ಸಂಕೇತವೂ ಹೌದು.

ಕುಂಕುಮಕ್ಕೆ ಅಚ್ಚ ಕೆಂಪು ಬಣ್ಣ ಬರಬೇಕು ಅನ್ನೋ ಕಾರಣಕ್ಕೆ ಅತಿಯಾಗಿ ಸೀಸವನ್ನು ಮಿಶ್ರಣ ಮಾಡಲಾಗುತ್ತಿದೆ. 118 ಕುಂಕುಮದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 95 ನ್ಯೂಜೆರ್ಸಿಯ ಮಳಿಗೆಗಳದ್ದು. ಉಳಿದ 23 ಮಾದರಿಯನ್ನು ಮುಂಬೈ ಮತ್ತು ದೆಹಲಿ ಮಳಿಗೆಯಿಂದ ತರಿಸಲಾಗಿತ್ತು.

ಶೇ.80 ರಷ್ಟು ಕುಂಕುಮದಲ್ಲಿ ಸೀಸದ ಪ್ರಮಾಣ ಅತಿಯಾಗಿತ್ತು. 2007ರಲ್ಲೂ ಈ ಬಗ್ಗೆ ಎಪ್ ಡಿ ಎ ಎಚ್ಚರಿಕೆ ನೀಡಿತ್ತು. ಕುಂಕುಮದಲ್ಲಿ ಶೇ.43 ಕ್ಕಿಂತ್ಲೂ ಅಧಿಕ ಪ್ರಮಾಣದಲ್ಲಿ ಸೀಸವನ್ನು ಬೆರೆಸಲಾಗುತ್ತಿದೆ. ಇದು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಂತೂ ತೀರಾ ಅಪಾಯಕಾರಿ ಎಂತಾ ಸಂಶೋಧಕರು ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...