alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಬಾ ಸಮಯ ಕುಳಿತುಕೊಂಡಿದ್ರೆ ಕಾಡುತ್ತೆ ವೀಕ್ನೆಸ್

ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳುವ ಮಹಿಳೆಯರ ವಯಸ್ಸು ಹೆಚ್ಚಾದಂತೆ ಕಾಣುವ ಜೊತೆಗೆ ಶರೀರ ದುರ್ಬಲವಾಗುತ್ತದೆಯಂತೆ. ಆಸ್ಟ್ರೇಲಿಯಾ ಕ್ವೀನ್ಸ್ಲ್ಯಾಂಡ್ ಸಂಶೋಧಕರು 12 ವರ್ಷಗಳ ಕಾಲ ಸುಮಾರು 5,500 ಮಹಿಳೆಯರನ್ನು ಅಧ್ಯಯನ ನಡೆಸಿ ಈ ಸಂಗತಿ ಬಹಿರಂಗಪಡಿಸಿದ್ದಾರೆ.

ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯದ Paul Gaudner ಪ್ರಕಾರ, ದಿನದಲ್ಲಿ 10 ಗಂಟೆಗಿಂತ ಹೆಚ್ಚು ಹೊತ್ತು ಕುಳಿತುಕೊಂಡಿರುವ ಮಹಿಳೆಯರ ಶರೀರ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆಯಂತೆ. ಕಡಿಮೆ ಸಮಯ ಕುಳಿತುಕೊಳ್ಳುವ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾ ಕಡಿಮೆ ಎಂದವರು ಹೇಳಿದ್ದಾರೆ.

ಪ್ರತಿ ದಿನ 5 ಗಂಟೆ ಕುಳಿತಿರುವುದು ಮಧ್ಯದ ಮಟ್ಟ. 3.5 ಗಂಟೆಯವರೆಗೆ ಕುಳಿತಿರುವುದು ಕಡಿಮೆ ಮಟ್ಟ. 5 ಗಂಟೆಗಿಂತ ಹೆಚ್ಚು ಗಂಟೆಗಳ ಕಾಲ ಕುಳಿತ್ರೆ ಅದನ್ನು ಏರಿಕೆ ಮಟ್ಟ ಎನ್ನಬಹುದು. ಏರಿಕೆ ಮಟ್ಟದಲ್ಲಿ ಮಹಿಳೆಯರಿಗೆ ಬಲಹೀನತೆ ಸಮಸ್ಯೆ ಕಾಡುತ್ತದೆ. ರೋಗಗಳನ್ನು ಎದುರಿಸುವ ಶಕ್ತಿ ಇರುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...