alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕು ಕಚ್ಚಿದ್ದಕ್ಕೆ ಸತ್ತೇ ಹೋದ್ಲು ಮಹಿಳೆ..!

cat

ಜಪಾನ್ ನಲ್ಲಿ ಬೆಕ್ಕು ಕಚ್ಚಿದ್ರಿಂದ tick-borne ಎಂಬ ಖಾಯಿಲೆಯಿಂದ ಮಹಿಳೆ ಮೃತಪಟ್ಟಿದ್ದಾಳೆ. ಬೆಕ್ಕು ಕಚ್ಚಿ ಮಲೇರಿಯಾದಂತಹ ರೋಗ ಬಂದು ಮನುಷ್ಯರು ಮೃತಪಟ್ಟಿರುವ ಘಟನೆ ಇದೇ ಮೊದಲು ಎನ್ನಲಾಗ್ತಿದೆ.

50 ವರ್ಷದ ಮಹಿಳೆ, ಅನಾರೋಗ್ಯ ಪೀಡಿತ ಬೆಕ್ಕಿಗೆ ಆರೈಕೆ ಮಾಡಲು ಮುಂದಾಗಿದ್ಲು. ಈ ವೇಳೆ ಕೆರಳಿದ ಮಾರ್ಜಾಲ ಆಕೆಗೆ ಕಚ್ಚಿಬಿಟ್ಟಿದೆ. ಅದಾದ್ಮೇಲೆ ಅವಳಿಗೆ ತೀವ್ರ ಜ್ವರ ಶುರುವಾಗಿತ್ತು. Thrombocytopenia Syndrome ಎಂಬ ಖಾಯಿಲೆ ಅವಳನ್ನು ಆವರಿಸಿತ್ತು.

10 ದಿನಗಳ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮಹಿಳೆ ಕೊನೆಗೆ ಸಾವನ್ನಪ್ಪಿದ್ದಾಳೆ. ರೋಗ ಪೀಡಿತ ಬೆಕ್ಕು ಕಚ್ಚಿದ್ರಿಂದ್ಲೇ ಮಹಿಳೆಗೆ ಕೂಡ ಸೋಂಕು ತಗುಲಿತ್ತು ಅಂತಾ ವೈದ್ಯರು ತಿಳಿಸಿದ್ದಾರೆ.

SFTS ಅನ್ನೋದು ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಇದಾಗಿದ್ದು, ಚೀನಾ, ಕೊರಿಯಾ ಮತ್ತು ಜಪಾನ್ ನಲ್ಲಿ ಕಂಡು ಬಂದಿದೆ. ಈ ಸೋಂಕು ತಗುಲಿದವರು ಸಾವನ್ನಪ್ಪುವ ಸಾಧ್ಯತೆ ಶೇ.30ರಷ್ಟಿದೆ. 2013ರಲ್ಲಿ ಮೊದಲ ಬಾರಿ ಈ ರೋಗ ಕಾಣಿಸಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...