alex Certify
ಕನ್ನಡ ದುನಿಯಾ       Mobile App
       

Kannada Duniya

ಮೂತ್ರ ಕುಡಿದು ತೂಕ ಇಳಿಸಿಕೊಳ್ತಿದ್ದಾರೆ ಜನರು…!

ಬೊಜ್ಜು ಈಗ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ. ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ವ್ಯಾಯಾಮ, ಯೋಗ, ಡಯಟ್ ಹೀಗೆ ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಮೂತ್ರ ಸೇವನೆ ಕೂಡ ಹೆಚ್ಚಾಗಿದೆ.

ಯಸ್, ಮೂತ್ರದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಈ ಬಗ್ಗೆ ಅನೇಕ ಲೇಖನ, ಬ್ಲಾಗ್ ಗಳು ಬಂದಿವೆ. ಮೂತ್ರವನ್ನು ಮುಖಕ್ಕೆ ಹಾಕಿಕೊಳ್ಳುವುದ್ರಿಂದ ಸ್ವಚ್ಛ ಹಾಗೂ ಕಾಂತಿಯುತ ಮುಖವನ್ನು ಪಡೆಯಬಹುದು. ಇದಕ್ಕೆ ಯೂರಿನ್ ಥೆರಪಿ ಎಂದು ಹೆಸರಿಡಲಾಗಿದೆ.

ಮೂತ್ರ, ಸೌಂದರ್ಯಕ್ಕೊಂದೇ ಅಲ್ಲ ತೂಕ ಇಳಿಸಿಕೊಳ್ಳಲೂ ಸಹಕಾರಿ. ಬಾಹ್ಯಾಕಾಶ ವಿಜ್ಞಾನಿ ಕ್ರಿಸ್ಟಿಯೋ ಮೂತ್ರ ಸೇವನೆ ಮಾಡಿಯೇ ತೂಕ ಇಳಿಸಿಕೊಂಡಿದ್ದಾರಂತೆ. 13.6 ಕೆ.ಜಿ. ತೂಕ ಇಳಿಸಿಕೊಂಡಿರುವುದಾಗಿ ವಿಜ್ಞಾನಿ ಹೇಳಿದ್ದಾರೆ. ಮೇರಿಲ್ಯಾಂಡ್ ನಿವಾಸಿ ಜೂಲಿಯಾ ಕೂಡ ವಿಜ್ಞಾನಿ ಸಲಹೆ ಮೇರೆಗೆ ಮೂತ್ರ ಸೇವನೆ ಶುರು ಮಾಡಿದ್ದಾರಂತೆ. ಈವರೆಗೆ 12 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ.

ಈ ವಿಷ್ಯದ ಬಗ್ಗೆ ವೈದ್ಯರಾಗ್ಲಿ, ತಜ್ಞರಾಗ್ಲಿ ಯಾವುದೇ ಸ್ಪಷ್ಟ ಹೇಳಿಕೆಯನ್ನು ಈವರೆಗೆ ನೀಡಿಲ್ಲ. ಮೂತ್ರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ. ಕೆಲವೊಮ್ಮೆ ಮೂತ್ರ ಸೇವನೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...