alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಕಡಿಮೆಯಾಗಿದೆ ಧೂಮಪಾನಿಗಳ ಸಂಖ್ಯೆ, ಆದ್ರೆ….

ಭಾರತದಲ್ಲಿ ದಶಕದ ಹಿಂದೆ ಧೂಮಪಾನಿಗಳದ್ದೇ ದರ್ಬಾರ್. ಎಲ್ಲಾ ಕಡೆ ಸಿಗರೇಟ್, ಬೀಡಿ ಹಾವಳಿ. ಈಗ ಧಮ್ ಹೊಡೆಯುವವರ ಸಂಖ್ಯೆಯೇನೋ ಕಡಿಮೆಯಾಗಿದೆ. ಆದ್ರೆ ಸಣ್ಣ ಸಣ್ಣ ಮಕ್ಕಳು ಕೂಡ ಮದ್ಯವ್ಯಸನಿಗಳಾಗ್ತಿದ್ದಾರೆ. ಡ್ರಗ್ಸ್ ಚಟ ಅಂಟಿಸಿಕೊಳ್ತಿದ್ದಾರೆ.

ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೆ-2ನಲ್ಲಿ ಈ ಅಂಶ ಬಹಿರಂಗವಾಗಿದೆ. ಭಾರತದ ಯುವ ಜನತೆ ತಂಬಾಕು ತೊರೆದಿದ್ದಾರಾದ್ರೂ, ಮದ್ಯ ಮತ್ತು ಡ್ರಗ್ಸ್ ದಾಸರಾಗ್ತಿರೋದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. 12 ವರ್ಷದ ಮಕ್ಕಳು ಕೂಡ ಮದ್ಯಪಾನ ಮಾಡ್ತಿದ್ದಾರೆ. ಹೆರಾಯಿನ್ ನಂತಹ ಡ್ರಗ್ಸ್ ಗೆ ಅಂಟಿಕೊಂಡಿದ್ದಾರೆ.

ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ 247 ಮಿಲಿಯನ್ ಜನರು ಡ್ರಗ್ಸ್ ಗೆ ದಾಸರಾಗಿದ್ದಾರೆ. ಭಾರತದಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದವರು 10 ಮಿಲಿಯನ್ ಮಂದಿ. ಪ್ರತಿದಿನ ಇಂತಹ 10 ರೋಗಿಗಳನ್ನು ಪ್ರತಿ ಆಸ್ಪತ್ರೆಯಲ್ಲೂ ಕಾಣಬಹುದಾಗಿದೆ. ಸಾಮಾನ್ಯವಾಗಿ 15 ವರ್ಷದೊಳಗಿನವರಾಗಿದ್ದಾಗ್ಲೇ ಅವರು ಡ್ರಗ್ಸ್ ತೆಗೆದುಕೊಳ್ಳಲು ಆರಂಭಿಸಿರ್ತಾರೆ.

ಶೇ.21ರಷ್ಟು ಮಂದಿ ಪ್ರತಿ ದಿನ ಮದ್ಯ ಸೇವಿಸ್ತಿದ್ದಾರೆ. ಅಲ್ಕೋಹಾಲ್ ಮತ್ತು ಡ್ರಗ್ಸ್ ಆತ್ಮಹತ್ಯೆಗೂ ಮೂಲ ಕಾರಣ. ಕಳೆದ 20 ವರ್ಷಗಳಲ್ಲಿ ಇದಕ್ಕೆ ಸಂಬಂಧಿಸಿದ ಆತ್ಮಹತ್ಯೆ ಪ್ರಕರಣಗಳು ಶೇ.100ರಷ್ಟು ಹೆಚ್ಚಾಗಿವೆ. ಹಾಗಾಗಿ ಮಕ್ಕಳು ಚಟಕ್ಕೆ ಬೀಳದಂತೆ ಎಚ್ಚರ ವಹಿಸಿ. ಜನರಿಗೆ ನೆರವಾಗಲೆಂದೇ ಸರ್ಕಾರ ಸಹಾಯವಾಣಿಯನ್ನು ಕೂಡ ಆರಂಭಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...