alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ದೇಹದಲ್ಲಿ 22 ಲೀಟರ್ ರಕ್ತ ಹೀರಿದೆ ಕೊಕ್ಕೆ ಹುಳ

ಹುಕ್ವರ್ಮ್ ಅಥವಾ ಕೊಕ್ಕೆ ಹುಳ 14 ವರ್ಷದ ಬಾಲಕನ ಸಣ್ಣ ಕರುಳಿನಲ್ಲಿ ಸೇರಿಕೊಂಡು ಬರೋಬ್ಬರಿ 22 ಲೀಟರ್ ರಕ್ತವನ್ನು ಹೀರಿದೆ. ಉತ್ತರಾಖಂಡದ ಹಲ್ದ್ವಾನಿ ಮೂಲದ ಬಾಲಕ ತುಂಬಾನೇ ವೀಕ್ ಆಗಿದ್ದ. ಅವನ ದೇಹದಲ್ಲಿ ಕಬ್ಬಿಣಾಂಶದ ಕೊರತೆ, ರಕ್ತಹೀನತೆಯಿತ್ತು.

ಅದಕ್ಕೆ ಕಾರಣ ಏನು ಅನ್ನೋದು ಮಾತ್ರ ಗೊತ್ತಾಗಿರಲಿಲ್ಲ. ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಇದಕ್ಕೆಲ್ಲಾ ಕಾರಣ ಕೊಕ್ಕೆ ಹುಳ ಅನ್ನೋದನ್ನು ಪತ್ತೆ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ್ಲೂ ಅವನಿಗೆ ಈ ಸಮಸ್ಯೆ ಇತ್ತು.

ಈವರೆಗೆ ಬಾಲಕನಿಗೆ 22 ಲೀಟರ್ ರಕ್ತವನ್ನು ಕೊಡಲಾಗಿದೆ. ಯಾಕಂದ್ರೆ ಆತನ ದೇಹದಲ್ಲಿದ್ದ 22 ಲೀಟರ್ ರಕ್ತವನ್ನು ಕೊಕ್ಕೆ ಹುಳ ಹೀರಿಬಿಟ್ಟಿದೆ. ಅಪರೂಪದ ಕ್ಯಾಪ್ಸುಲ್ ಎಂಡೋಸ್ಕೋಪಿಯಲ್ಲಿ ಇದು ಪತ್ತೆಯಾಗಿದೆ. ಬಾಲಕನ ಸಣ್ಣ ಕರುಳಿನಲ್ಲಿ ಹತ್ತಾರು ಕೊಕ್ಕೆಹುಳಗಳು ಹೂತು ಹೋಗಿದ್ದವು ಅಂತಾ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...