alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತವನ್ನು ಬೆಂಬಿಡದೆ ಕಾಡ್ತಿದೆ ಟಿಬಿ ಕಾಯಿಲೆ

tb-patients

ಭಾರತೀಯರು ಆತಂಕಪಡುವಂತಹ ಸುದ್ದಿಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಭಾರತದಲ್ಲಿ ಕ್ಷಯ ರೋಗ ಪೀಡಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಾ ಇದೆ. ಕಳೆದ ಒಂದು ವರ್ಷದಲ್ಲಿ ಟಿಬಿಯಿಂದ ಮೃತಪಟ್ಟವರ ಸಂಖ್ಯೆ ದುಪ್ಪಟ್ಟಾಗಿದೆ. 2014ರಲ್ಲಿ 2 ಲಕ್ಷ 20 ಸಾವಿರ ಮಂದಿ ಟಿಬಿಯಿಂದ ಮೃತಪಟ್ಟಿದ್ದಾರೆ. ಆದ್ರೆ 2015ರಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಿದೆ. 2015ರಲ್ಲಿ ಟಿಬಿಯಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷ 80 ಸಾವಿರ ತಲುಪಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ವಿಶ್ವದ ಶೇಕಡಾ 27ರಷ್ಟು ಟಿಬಿ ಪೀಡಿತರು ಭಾರತದಲ್ಲಿದ್ದಾರೆ. ದೇಶದಲ್ಲಿ ಇದು ಅತ್ಯಂತ ಭಯಾನಕ ಸಾಂಕ್ರಾಮಿಕ ರೋಗವಾಗಿದೆ. 2015 ರಲ್ಲಿ 28 ಲಕ್ಷ ಕ್ಷಯ ರೋಗಿಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 2014 ರಲ್ಲಿ ಇದ್ರ ಸಂಖ್ಯೆ 22 ಲಕ್ಷವಿತ್ತು. ವಿಶ್ವದಲ್ಲಿ ಟಿಬಿ ರೋಗದಿಂದ ಮೃತಪಟ್ಟವರ ಸಂಖ್ಯೆ 96 ಲಕ್ಷದಿಂದ 1 ಕೋಟಿ ನಾಲ್ಕು ಲಕ್ಷಕ್ಕೆ ಬಂದು ನಿಂತಿದೆ.

ವಿಶ್ವದ ಇತರ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕ್ಷಯ ರೋಗಕ್ಕೆ ಚಿಕಿತ್ಸೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಈಗ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ಭಾರತದಲ್ಲಿ ಶೇಕಡಾ 59ರಷ್ಟು ರೋಗಿಗಳಿಗೆ ಮಾತ್ರ ಚಿಕಿತ್ಸೆ ಸಿಗ್ತಾ ಇರುವುದು ದುರಂತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...