alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹಿಮಾಲಯದಲ್ಲಿ ಯೋಧರ ಯೋಗಾಸನ

ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ವಿಧಾನ ಅನ್ನೋದನ್ನು ವೈದ್ಯಕೀಯ ಲೋಕ ಕೂಡ ಒಪ್ಪಿಕೊಂಡಿದೆ. ಕೋಪ, ಹತಾಶೆ, ನೋವು, ಒತ್ತಡ ಇವೆಲ್ಲವನ್ನು ನಿಯಂತ್ರಿಸಿಕೊಳ್ಳಲು ಯೋಗಾಸನ ಸಹಕಾರಿ.

ನಮ್ಮ ಮಾಂಸಖಂಡಗಳು ಮತ್ತು ಕೀಲುಗಳನ್ನು ಇದು ಬಲಪಡಿಸುತ್ತದೆ. ಹಾಗಾಗಿ ಯೋಧರು ಕೂಡ ಪ್ರತಿನಿತ್ಯ ತಪ್ಪದೇ ಯೋಗಾಸನ ಮಾಡುತ್ತಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಹಿಮಾಲಯದ ತಪ್ಪಲಲ್ಲಿ ಯೋಗ ಮಾಡ್ತಿರೋ ಫೋಟೋಗಳು ಈಗ ವೈರಲ್ ಆಗಿವೆ.

ಮೈಕೊರೆಯುವ ಚಳಿಯಲ್ಲೂ ಶಿಸ್ತುಬದ್ಧವಾಗಿ ವಿವಿಧ ಆಸನಗಳನ್ನು ಮಾಡ್ತಿರೋ ಭದ್ರತಾ ಪಡೆಗೆ ಎಲ್ಲರೂ ಶಹಬ್ಬಾಸ್ ಎಂದಿದ್ದಾರೆ. ಯೋಧರ ಫಿಟ್ನೆಸ್, ಶಿಸ್ತು, ದೇಶಸೇವೆ, ತ್ಯಾಗ, ಪರಿಶ್ರಮವನ್ನು ಕೊಂಡಾಡಿದ್ದಾರೆ. ನಮ್ಮ ವೀರ ಯೋಧರನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಹಿಮವೀರರು ಅಂತಾ ಕರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...