alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಸ್ತನ ಕ್ಯಾನ್ಸರ್

22_10_2016-22brest

ಭಾರತೀಯರನ್ನು ಕ್ಯಾನ್ಸರ್ ಕಿತ್ತು ತಿನ್ನುತ್ತಿದೆ. ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನ ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಬಲಿಯಾಗ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹಿರಿಯ ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ತಿದ್ದರೆ ಭಾರತದಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ.

ಮಹಿಳೆಯರು ಈ ಬಗ್ಗೆ ನಿರ್ಲಕ್ಷ್ಯವಹಿಸ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಭಾರತೀಯರ ಮಡಿವಂತಿಕೆಯಿಂದಾಗಿ ಈ ರೋಗ ಉಲ್ಬಣಿಸ್ತಿದೆ. ಕೆಲ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಜ್ಞಾನವಿಲ್ಲ. ಇನ್ನು ಕೆಲವರು ಈ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ತೋರ್ತಿದ್ದಾರೆ. ನಿಯಮಿತ ರೂಪದಲ್ಲಿ ಸ್ತನಗಳ ಪರೀಕ್ಷೆ ಮಾಡಿಸಿಕೊಳ್ತಾ ಇಲ್ಲ. ಆರಂಭದಲ್ಲಿ ಈ ರೋಗದ ಬಗ್ಗೆ ತಿಳಿದಲ್ಲಿ ಇದನ್ನು ಗುಣಪಡಿಸಬಹುದಾಗಿದೆ.

ಶೇಕಡಾ 60ರಷ್ಟು ಮಂದಿ ಮಹಿಳೆಯರು ಕೊನೆ ಸ್ಟೇಜ್ ತಲುಪಿದ ಮೇಲೆ ಆಸ್ಪತ್ರೆ ಸೇರುತ್ತಿದ್ದಾರೆ. ಶೇಕಡಾ 10 ಮಂದಿ ಮಾತ್ರ ಮೊದಲನೇ ಸ್ಟೇಜ್ ನಲ್ಲಿಯೇ ಆಸ್ಪತ್ರೆ ಸೇರಿ ಈ ರೋಗದಿಂದ ಮುಕ್ತಿ ಪಡೆಯುತ್ತಿದ್ದಾರೆ. ಈ ಕ್ಯಾನ್ಸರ್ ಗೆ ಮುಖ್ಯ ಕಾರಣ ಈಗಿನ ಜೀವನ ಶೈಲಿ ಎನ್ನಲಾಗ್ತಾ ಇದೆ.

ಬೊಜ್ಜು, ವ್ಯಾಯಾಮವಿಲ್ಲದ ಜೀವನ, ವಯಸ್ಸಾದ ಮೇಲೆ ಗರ್ಭಧಾರಣೆ, ಸ್ತನ್ಯಪಾನ ಮಾಡಿಸದಿರುವುದು ಹಾಗೂ ನಗರಗಳಲ್ಲಿ ಹೆಚ್ಚಾಗ್ತಿರುವ ನೈಟ್ ಕ್ಲಬ್ ಸಂಸ್ಕೃತಿ ಇದಕ್ಕೆ ಮುಖ್ಯ ಕಾರಣವಾಗಿದೆ. ಆರಂಭದಲ್ಲಿ ಸ್ತನದಲ್ಲಿ ನೋವು ರಹಿತ ಗಡ್ಡೆ ಕಾಣಿಸಿಕೊಳ್ಳುತ್ತದೆ. ನಿಪ್ಪಲ್ ನಿಂದ ರಸ ಹೊರಗೆ ಬರುತ್ತದೆ. ತೋಳಿನ ಸಂಧಿಯಲ್ಲಿ ಊತ ಕಾಣಿಸಿಕೊಳ್ಳುವ ಜೊತೆಗೆ ಸ್ತನದ ಗಾತ್ರದಲ್ಲಿ ಬದಲಾವಣೆ ಕಂಡು ಬರುತ್ತದೆ.

25 ವರ್ಷದ ನಂತ್ರ ಆಗಾಗ ವೈದ್ಯರನ್ನು ಭೇಟಿ ಮಾಡಿ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರತಿ ಬಾರಿ ಮುಟ್ಟಿನ ನಂತ್ರ ಸ್ವಯಂ ಸ್ತನ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಹೀಗಾದಲ್ಲಿ ಮಾತ್ರ ಭಾರತದಲ್ಲಿ ಹೆಚ್ಚಾಗ್ತಿರುವ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ತರಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...