alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆಯ ಅಂಡಾಶಯದಲ್ಲಿತ್ತು 59 ಕೆಜಿ ತೂಕದ ಗಡ್ಡೆ…!

ಮಹಿಳೆಯೊಬ್ಬಳ ದೇಹದಲ್ಲಿ ಬೆಳೆದಿದ್ದ 59 ಕೆಜಿ ತೂಕದ ಅಂಡಾಶಯ ಗಡ್ಡೆಯನ್ನು ಅಮೆರಿಕದ ವೈದ್ಯರು ಬರೋಬ್ಬರಿ 5 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

38 ವರ್ಷದ ಮಹಿಳೆಯ ದೇಹದಲ್ಲಿದ್ದ ಈ ಅಂಡಾಶಯ ಗಡ್ಡೆ 132 ಪೌಂಡ್ ಅಂದರೆ 59.5 ಕೆಜಿ ತೂಕ ಇತ್ತು. ಇದನ್ನು 5 ತಾಸು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಗಿದೆ. ಹಾಗೆ ತೆಗೆಯುವಾಗ ಆಕೆಯ ಎಡಭಾಗದ ಅಂಡಾಶಯ, ಎಡದ ಟ್ಯೂಬ್ ಹಾಗೂ ಈ ಗಡ್ಡೆಯ ಸೋಂಕು ತಾಕಿದ್ದ ಮಾಂಸವನ್ನು ತೆಗೆದಿರುವುದಾಗಿ ಅಮೆರಿಕದ ಡ್ಯಾನ್ಬಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಗಡ್ಡೆ 100 ಸೆಂಟಿಮೀಟರ್ ನಷ್ಟು ದೊಡ್ಡದಾಗಿಯೂ ಇತ್ತು. ಅಲ್ಲದೇ ಪ್ರತಿ ವಾರವೂ 10 ಪೌಂಡ್ ನಲ್ಲಿ ಬೆಳೆಯುತ್ತಿತ್ತು ಎಂದಿದ್ದಾರೆ ವೈದ್ಯರು. ಕೊನೆಗೂ 5 ತಾಸುಗಳ ಶ್ರಮದಿಂದ ಈ ಗಡ್ಡೆಯನ್ನು ಕಿತ್ತು ಹಾಕುವಲ್ಲಿ 12 ಸರ್ಜನ್ ಗಳ ತಂಡ ಯಶಸ್ವಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...