alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯಕೀಯ ಲೋಕದಲ್ಲೊಂದು ಹೊಸ ಪವಾಡ…!

ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಮಹಿಳೆಯೊಬ್ಬಳು ಮಗುವಿಗೆ ಸ್ತನಪಾನ ಮಾಡಲು ಯಶಸ್ವಿಯಾಗಿದ್ದಾಳೆ. ಸ್ತನ ವೃದ್ಧಿ ಅಥವಾ ವಜಿನೋಪ್ಲಾಸ್ಟಿಯಂತಹ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿಲ್ಲ. ಲಿಂಗ ಬದಲಾವಣೆಯನ್ನೂ ಮಾಡಿಕೊಂಡಿಲ್ಲ.

ಅಷ್ಟೇ ಅಲ್ಲ ಮಗುವಿಗೆ ಜನ್ಮ ನೀಡಿಲ್ಲ. ಆದ್ರೂ ಸ್ತನಪಾನ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಹಾರ್ಮೋನ್ ಬದಲಾವಣೆಯಿಂದ ಇದು ಸಾಧ್ಯವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ತೃತೀಯ ಲಿಂಗಿಯ ಸಂಗಾತಿ ಗರ್ಭಿಣಿಯಾಗಿದ್ಲು.

ಆದ್ರೆ ಮಗುವಿಗೆ ಹಾಲುಣಿಸುವುದು ಆಕೆಗೆ ಇಷ್ಟವಿರಲಿಲ್ಲ. ಹಾಗಾಗಿ ಕೆನಡಾದಲ್ಲಿ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಿಸಿಕೊಂಡ ತೃತೀಯ ಲಿಂಗಿ ಮಹಿಳೆ, ಈಗ  ಹಸುಗೂಸಿಗೆ ತಾನೇ ಹಾಲುಣಿಸಲು ಸಜ್ಜಾಗಿದ್ದಾಳೆ. ಮಗು ಜನಿಸಿ 6 ತಿಂಗಳವರೆಗೂ ಆಕೆ ಸ್ತನಪಾನ ಮಾಡಿಸಬಹುದು ಅಂತಾ ವೈದ್ಯರು ತಿಳಿಸಿದ್ದಾರೆ.

ಇಂತಹ ಬೆಳವಣಿಗೆ ನಡೆದಿರೋದು ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊದಲು. ಮಗುವಿಗೆ ಜನ್ಮವನ್ನೂ ನೀಡದೇ ಸ್ತನಪಾನ ಮಾಡುವಲ್ಲಿ ತೃತೀಯ ಲಿಂಗಿ ಯಶಸ್ವಿಯಾಗಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ ಅಂತಾ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...