alex Certify
ಕನ್ನಡ ದುನಿಯಾ       Mobile App
       

Kannada Duniya

8 ಕೈಕಾಲುಗಳನ್ನು ಹೊಂದಿದ್ದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

baby

ದೆಹಲಿಯಲ್ಲಿ ವಿಶ್ವದಲ್ಲೇ ಅತ್ಯಂತ ಅಪರೂಪವಾದ ಶಸ್ತ್ರಚಿಕಿತ್ಸೆಯೊಂದು ನಡೆದಿದೆ. 8 ಕೈಕಾಲುಗಳೊಂದಿಗೆ ಜನಿಸಿದ್ದ ಮಗುವಿಗೆ ವೈದ್ಯರು ಸರ್ಜರಿ ಮಾಡಿದ್ದಾರೆ. ಹೆಚ್ಚುವರಿ ಕೈಕಾಲುಗಳನ್ನು ದೇಹದಿಂದ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.

ಇರಾಕ್ ನಲ್ಲಿ ಜನಿಸಿದ್ದ ಕರಮ್ ಎಂಬ ಮಗುವಿಗೆ ಈಗ 7 ತಿಂಗಳು. ಅವಳಿ ಭ್ರೂಣಗಳು ಸರಿಯಾಗಿ ಬೆಳವಣಿಗೆಯಾಗದ ಕಾರಣ ಮಗುವಿಗೆ 8 ಕೈಕಾಲುಗಳಿದ್ವು. ತಂದೆ ಸರ್ವೆದ್ ಅಹ್ಮದ್ ನದರ್, ಮಗುವನ್ನು ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಕರೆತಂದಿದ್ರು.

ಹಿರಿಯ ವೈದ್ಯರಾದ ಗೌರವ್ ರಾಥೋಡ್ ನೇತೃತ್ವದ ತಂಡ ಮಗುವಿನ ಹೆಚ್ಚುವರಿ ಕೈಕಾಲುಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದೆ. ಮಗುವಿಗೆ ಮೂರು ಹಂತದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಶ್ವದಲ್ಲಿ ಇದು ಅತ್ಯಂತ ಅಪರೂಪದ ಪ್ರಕರಣ ಅಂತಾ ವೈದ್ಯರು ತಿಳಿಸಿದ್ದಾರೆ.

14 ದಿನಗಳಿದ್ದಾಗ್ಲೇ ಮಗುವನ್ನು ಭಾರತಕ್ಕೆ ಕರೆತರಲಾಗಿತ್ತು. ಮಗು ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಬೇಕು ಎಂದಿರುವ ವೈದ್ಯರು, ಆತ ಸಂಪೂರ್ಣ ಚೇತರಿಸಿಕೊಳ್ಳುತ್ತಾನೆ ಅಂತಾ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...