alex Certify ಆರೋಗ್ಯಕ್ಕೆ ಸಹಕಾರಿ ʼಪಾಲಕ್’ ಸೊಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಸಹಕಾರಿ ʼಪಾಲಕ್’ ಸೊಪ್ಪು

Spinach: Nutrition, health benefits, and dietಪಾಲಕ್ ಸೊಪ್ಪು ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಎಂದು ನೀವಿಗಾಗಲೇ ಅರಿತಿರುತ್ತೀರಿ. ಹೌದು, ಪಾಲಕ್ ಸೊಪ್ಪಿನಿಂದ ತಯಾರಿಸಿದ ಸಾರು, ಪಲ್ಯ, ಚಪಾತಿ ಸೇವಿಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ.

ಪಾಲಕ್ ಸೊಪ್ಪಿನಲ್ಲಿರುವ ಪ್ರೋಲೇಟ್ ಎಂಬ ಅಂಶ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕೆರೋಟಿನೈಡ್, ದೇಹದಲ್ಲಿರುವ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ನಿಯಮಿತವಾದ ಪಾಲಕ್ ಸೊಪ್ಪಿನ ಸೇವನೆಯಿಂದ ಮುಖದಲ್ಲಿ ಸುಕ್ಕು ಬರುವುದನ್ನು ತಡೆಗಟ್ಟಬಹುದಾಗಿದೆ.

ಕಣ್ಣುಗಳ ದೃಷ್ಠಿ ದೋಷಕ್ಕೆ, ನರಗಳ ವೀಕ್ ನೆಸ್ ನಿವಾರಣೆಗೆ ಪಾಲಕ್ ಸೊಪ್ಪು ಅಗತ್ಯ. ಜ್ಞಾಪಕ ಶಕ್ತಿ ಹೆಚ್ಚು ಮಾಡುವ, ಕೀಲುನೋವು ಕಡಿಮೆ ಮಾಡುವ ಗುಣ ಪಾಲಕ್ ಸೊಪ್ಪಿಗಿದೆ. ದೇಹದಲ್ಲಿ ರಕ್ತ ವೃದ್ಧಿಸುವಲ್ಲಿ, ಚರ್ಮ ಬಿಗಿಯಾಗಿಡುವಲ್ಲಿ ಇದು ಸಹಕಾರಿಯಾಗಿದೆ.

ಒಟ್ಟಾರೆಯಾಗಿ ವಿಟಮಿನ್ ‘ಎ’ ಜೀವಸತ್ವ ಹೊಂದಿರುವುದರಿಂದ ಇದನ್ನು ಆಹಾರದಲ್ಲಿ ಯಥೇಚ್ಛವಾಗಿ ಬಳಸುವುದರಿಂದ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...