alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರೋದು ಇದೇ ಮೊದಲು….

ವಿಶ್ವದಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿರುವುದು ಇದೇ ಮೊದಲು. 33 ವರ್ಷದ ಫ್ರಾಂಕ್ ಎಂಬಾತನಿಗೆ ಆತನ ಸಹೋದರ ಎರಿಕ್ ಚರ್ಮ ದಾನ ಮಾಡಿದ್ದಾನೆ. ಅಪಘಾತವೊಂದರಲ್ಲಿ ಫ್ರಾಂಕ್ ಗಾಯಗೊಂಡಿದ್ದ. ಆತನ ದೇಹದ ಶೇ.95ರಷ್ಟು ಭಾಗ ಸುಟ್ಟು ಹೋಗಿತ್ತು.

ಫ್ರಾಂಕ್ ಗೆ ಸಹೋದರನ ಬೆನ್ನು ಮತ್ತು ತೊಡೆಯ ಚರ್ಮವನ್ನು ಹಾಕಿ ಕಸಿ ಮಾಡಲಾಗಿದೆ. ಡಜನ್ ಗಟ್ಟಲೆ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. ನಂತರ ಆತನನ್ನು ವೈದ್ಯರು ಪುನರ್ವಸತಿ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ.

ಅವಳಿಗಳ ಚರ್ಮವನ್ನು ಪರಸ್ಪರರಿಗೆ ಕಸಿ ಮಾಡಿದ ಉದಾಹರಣೆಗಳಿವೆ. ಆದ್ರೆ ಉಳಿದವರ ದೇಹದ ಚರ್ಮವನ್ನು ಇನ್ನೊಂದು ದೇಹ ಸ್ವೀಕರಿಸುವುದಿಲ್ಲ. ಆ ರೀತಿ ಮಾಡಿದ್ರೆ ಅಪಾಯವೇ ಹೆಚ್ಚಾಗಿರುತ್ತದೆ. ಆದ್ರೀಗ ಇದೇ ಮೊದಲ ಬಾರಿಗೆ ಸಹೋದರನ ಚರ್ಮವನ್ನು ಕಸಿ ಮಾಡಲಾಗಿದೆ.

ಅದು ಕೂಡ ಫ್ರಾಂಕ್ ನ ಮೈ ಪೂರ್ತಿಯಾಗಿ ಸುಟ್ಟು ಹೋಗಿತ್ತು. ಇಡೀ ದೇಹಕ್ಕೆ ಈ ರೀತಿ ಚರ್ಮ ಕಸಿ ಮಾಡಿರುವುದು ಕೂಡ ಇದೇ ಮೊದಲು. ಪ್ಯಾರಿಸ್ ನ ಸೇಂಟ್ ಲೂಯಿಸ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...