alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ನಲ್ಲಿ ಹಂದಿ ಜ್ವರದ ರುದ್ರನರ್ತನ

People cover their faces with masks as preventive measures against swine flu inside RML Hospital premise in Delhi on 18 Feb 2015. Swine flu has claimed more than 500 lives in the country, according to Indian news reports. Manit.DNA

ಹೈದ್ರಾಬಾದ್ನಲ್ಲಿ ಮಹಾಮಾರಿ ಹಂದಿ ಜ್ವರ ಜನರನ್ನು ಕಾಡ್ತಾ ಇದೆ. ಮಾರಕ ಎಚ್1ಎನ್1 ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅವರ ಪೈಕಿ ಓರ್ವನನ್ನು ಜನವರಿ 11ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವೈರಲ್ ಫೀವರ್ ಮತ್ತು ಶ್ವಾಸಕೋಶದ ತೊಂದರೆಯಿಂದ ಹಲವರು ಬಳಲುತ್ತಿದ್ದಾರೆ, ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸ್ತಾ ಇದೆ ಅಂತಾ ಹಿರಿಯ ವೈದ್ಯರು ತಿಳಿಸಿದ್ದಾರೆ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಶ್ವಾಸಕೋಶದ ಸಮಸ್ಯೆ ನಿವಾರಣೆಗಾಗಿ ECMO ಎಂಬ ಚಿಕಿತ್ಸೆ ನೀಡಲಾಗುತ್ತಿದೆ.

ಶ್ವಾಸಕೋಶಕ್ಕೆ ತೀವ್ರ ಹಾನಿಗೊಳಗಾಗಿರುವ ರೋಗಿಗಳು ಬದುಕುಳಿಯುವುದು ಕಷ್ಟ ಎನ್ನುತ್ತಾರೆ ವೈದ್ಯರು. ರಾಜ್ಯದಲ್ಲಿ ಕೇವಲ ಜನವರಿ ತಿಂಗಳಿನಲ್ಲೇ ಹಂದಿ ಜ್ವರದಿಂದ 11 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಗಾಂಧಿ ಆಸ್ಪತ್ರೆಯಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 6 ಮಕ್ಕಳಿದ್ದಾರೆ. ಜನವರಿಯಲ್ಲಿ ಒಟ್ಟು 150 ಜನರಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದೆ. ರಾತ್ರಿ ವೇಳೆ ರಾಜ್ಯದಲ್ಲಿ ಉಷ್ಣಾಂಶ ಅತ್ಯಂತ ಕಡಿಮೆಯಾಗಿ ಚಳಿ ಇದ್ದಿದ್ದರಿಂದ ಸೋಂಕು ವೇಗವಾಗಿ ಹರಡಿದೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...