alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಎದೆ ಹಾಲೂ ಮಾರಾಟಕ್ಕೆ ಲಭ್ಯ..!

Milk_284

ಹುಟ್ಟಿದ ಅನೇಕ ಮಕ್ಕಳು ತಾಯಿಯ ಹಾಲಿಲ್ಲದೇ ಅಪೌಷ್ಟಿಕತೆಯನ್ನು ಎದುರಿಸುವ ಪ್ರಮೇಯ ಇನ್ನಿರುವುದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಎದೆ ಹಾಲು ಒದಗಿಸುವ ಮಾರಾಟ ಕೇಂದ್ರ ‘ನ್ಯೂ ಏಜ್ ಮಿಲ್ಕ್ ಬ್ಯಾಂಕ್’ ತೆರೆಯಲು ಚಿಂತನೆ ನಡೆಸಲಾಗಿದೆ.

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆ ಸೇರಿದಂತೆ ಪ್ರಮುಖ ಹೆರಿಗೆ ಆಸ್ಪತ್ರೆಗಳಲ್ಲಿ ದಾಖಲಾಗುವ ತಾಯಂದಿರಿಗೆ ಉಚಿತವಾಗಿ ಪೌಷ್ಟಿಕ ಆಹಾರವನ್ನು ಕೊಟ್ಟು ಅವರಿಂದ ಹಾಲು ಪಡೆಯಲಾಗುತ್ತದೆ. ಹೀಗೆ ಸಂಗ್ರಹಗೊಂಡ ಹಾಲನ್ನು ಬ್ಯಾಕ್ಟೀರಿಯಾ ಪರೀಕ್ಷೆಗೆ ಒಳಪಡಿಸುತ್ತಾರೆ. ನಂತರ ಅದನ್ನು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಡಿಸಿ 62.5 ಸೆಂಟಿಗ್ರೇಡ್ ಉಷ್ಣಾಂಶದಲ್ಲಿ 30 ನಿಮಿಷ ಕುದಿಸಿ ಪ್ಯಾಕ್ ಮಾಡಲಾಗುತ್ತದೆ.

ಪ್ಯಾಕ್ ಮಾಡಿದ ಹಾಲು 50, 100, 200 ಮಿ.ಗ್ರಾಂ. ಗಳಲ್ಲಿ ಲಭ್ಯವಿರುತ್ತದೆ. ಈ ಪ್ಯಾಕೆಟ್ ಹಾಲನ್ನು 3-6 ತಿಂಗಳುಗಳ ಕಾಲ ಡೀಪ್ ಪ್ರೀಜರ್ ನಲ್ಲಿ ಇಡಬಹುದು. ಮಗುವಿಗೆ ಈ ಹಾಲನ್ನು ಕುಡಿಸುವಾಗ ಸಾಮಾನ್ಯ ಉಷ್ಣಾಂಶಕ್ಕೆ ತಂದು ನಂತರ ಕುಡಿಸಬೇಕು.

ಈಗಾಗಲೇ ಈ ಮಿಲ್ಕ್ ಬ್ಯಾಂಕ್ ಸೌಲಭ್ಯ ತೆಲಂಗಾಣ, ರಾಜಸ್ಥಾನ, ಆಂಧ್ರ ಪ್ರದೇಶ, ಚೆನ್ನೈ ಮುಂತಾದ ಕಡೆ ಕಾರ್ಯ ನಿರ್ವಹಿಸುತ್ತಿವೆ. ಒಮ್ಮೆ ಹೀಗಾದಲ್ಲಿ ಎದೆಹಾಲಿನ ಕೊರತೆ ಅನುಭವಿಸುತ್ತಿರುವ ಮಕ್ಕಳಿಗೆ ತುಂಬ ಉಪಯೋಗವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...