alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವನ ತಲೆ ಕಸಿಗೆ ನಡೆದಿದೆ ತಯಾರಿ

mk-23

ವೈದ್ಯಕೀಯ ಲೋಕಕ್ಕೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಹೃದಯ, ಕಿಡ್ನಿ, ಲಿವರ್ ಹೀಗೆ ದೇಹದ ಅನೇಕ ಭಾಗಗಳ ಕಸಿ ಮಾಡಿ ಯಶಸ್ವಿಯಾಗಿರುವ ವೈದ್ಯಕೀಯ ತಜ್ಞರು ಈಗ ಮಾನವನ ತಲೆಗೆ ಕೈ ಹಾಕಿದ್ದಾರೆ. ತಲೆ ಕಸಿ ಪ್ರಯೋಗಕ್ಕೆ ಭಾಗಶಃ ತಯಾರಿ ಪೂರ್ಣಗೊಂಡಿದೆ.

ವಿಶ್ವದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು, 2017 ರ ಆರಂಭದ ತಿಂಗಳುಗಳಲ್ಲಿಯೇ ಮಾನವ ತಲೆಯ ಕಸಿ ಕಾರ್ಯ ನಡೆಯಲಿದೆ. ಒಂದು ವೇಳೆ ಈ ಕಸಿ ಕಾರ್ಯದಲ್ಲಿ ವಿಫಲವಾದ್ರೆ ವೈದ್ಯಕೀಯ ತಜ್ಞರು, ಸಂಶೋಧಕರು ಜೈಲು ಸೇರಲಿದ್ದಾರೆ.

ಇದಕ್ಕಾಗಿ ರಷ್ಯಾದ ಯುವಕನೊಬ್ಬ ಸ್ವಯಂ ಪ್ರೇರಣೆಯಿಂದ ತಲೆಯನ್ನು ದಾನ ನೀಡಲು ಮುಂದಾಗಿದ್ದಾನೆ. ಚೀನಾ ಹಾಗೂ ಇಟಲಿ ಕಸಿ ತಜ್ಞರು, ರಷ್ಯಾದ 31 ವರ್ಷದ ಕಂಪ್ಯೂಟರ್ ವಿಜ್ಞಾನಿ ವಾಲೆರಿ ಸ್ಪಿರಿಟನೋವಾ ಮೇಲೆ ಈ ಪ್ರಯೋಗ ಮಾಡಲಿದ್ದಾರೆ. ಮಾನವ ತಲೆ ಕಸಿ ಯಶಸ್ವಿಯಾದ್ರೆ ಅನೇಕ ರೋಗಗಳಿಗೆ ಚಿಕಿತ್ಸೆ ಸಿಗಲಿದೆ. ಪ್ರಯೋಗ ವಿಫಲವಾದ್ರೆ ಹತ್ಯೆ ಕೇಸ್ ದಾಖಲಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...