alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಮೊಟ್ಟೆಯನ್ನು 2 ನಿಮಿಷದಲ್ಲಿ ಪತ್ತೆ ಹಚ್ಚಿ

ಇದು ನಕಲಿ ದುನಿಯಾ. ಇಲ್ಲಿ ತಿನ್ನುವ ಆಹಾರದಿಂದ ಎಲ್ಲ ರೀತಿಯ ವಸ್ತುಗಳೂ ನಕಲಿ. ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

ನಕಲಿ ಯಾವುದು ಅಸಲಿ ಯಾವುದು ಎಂಬುದನ್ನು ತಿಳಿಯೋದು ಕಷ್ಟ. ನಕಲಿ ಮೊಟ್ಟೆ ಬಗ್ಗೆ ನೀವೂ ಜಾಗರೂಕರಾಗಿರಬೇಕು. ನಕಲಿ ಮೊಟ್ಟೆ ಹೇಗಿರುತ್ತೆ ಎಂಬುದನ್ನು ತಿಳಿದುಕೊಂಡಲ್ಲಿ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಸಾಮಾನ್ಯವಾಗಿ ಅಸಲಿ ಮೊಟ್ಟೆ ಹೊಳಪಿರುವುದಿಲ್ಲ. ನಕಲಿ ಮೊಟ್ಟೆಯ ಮೇಲ್ಭಾಗ ಬೆಳ್ಳಗೆ ಹೊಳೆಯುತ್ತದೆ.

ಅಸಲಿ ಮೊಟ್ಟೆಯ ಮೇಲ್ಬಾಗ ಮುಟ್ಟಿದಾಗ ನಿಮಗೆ ಮೃದು ಅನುಭವವಾಗುತ್ತದೆ. ನಕಲಿ ಮೊಟ್ಟೆ ಮೇಲ್ಭಾಗ ಮೃದುವಾಗಿರುವುದಿಲ್ಲ.

ಅಸಲಿ ಮೊಟ್ಟೆಯನ್ನು ಅಲುಗಾಡಿಸಿದಾಗ ಒಳಗಿಂದ ಯಾವುದೇ ಶಬ್ದ ಬರುವುದಿಲ್ಲ. ನಕಲಿ ಮೊಟ್ಟೆ ಅಲುಗಾಡಿಸಿದಾಗ ಒಳಗೆ ಏನೋ ಇದೆ ಎಂಬುದು ಗೊತ್ತಾಗುತ್ತದೆ.

ಅಸಲಿ ಮೊಟ್ಟೆಯನ್ನು ಒಡೆದಾಗ ಹಳದಿ ಭಾಗ ಬಿಳಿ ಭಾಗದಿಂದ ಬೇರ್ಪಟ್ಟಿರುತ್ತದೆ. ಆದ್ರೆ ನಕಲಿ ಮೊಟ್ಟೆಯಲ್ಲಿ ಇವೆರಡೂ ಅಂಟಿಕೊಂಡಿರುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...