alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಯಂತೆ ಫಿಟ್ & ಫೈನ್ ಆಗಲು ಇಲ್ಲಿದೆ ಸೂತ್ರ

virat-kohli-diet-and-workout

ಭಾರತೀಯರ ಪಾಲಿಗೆ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಈ ವರ್ಷ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಬಾಯಲ್ಲೂ ಮೊಳಗಿದ ಮಂತ್ರ ವಿರಾಟ್ ಕೊಹ್ಲಿ. ಟೆಸ್ಟ್, ಏಕದಿನ, ಟಿ-20, ಐಪಿಎಲ್ ಎಲ್ಲಾ ಕಡೆ ಕೊಹ್ಲಿ ಕಮಾಲ್.

ಕೇವಲ ಮೈದಾನದಲ್ಲಿ ಮಾತ್ರವಲ್ಲ, ಕ್ರಿಕೆಟ್ ಹೊರತಾಗಿಯೂ ವಿರಾಟ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಖತ್ ಹ್ಯಾಂಡ್ಸಮ್ ಹಾಗೂ ಫಿಟ್&ಫೈನ್ ಆಗಿರೋ ಕೊಹ್ಲಿ ಅಂದ್ರೆ ಹುಡ್ಗೀರೆಲ್ಲ ಹಿಂದೆ ಬೀಳ್ತಾರೆ. ಈ ಬಾಡಿ ಫಿಟ್ನೆಸ್ ಗಾಗಿ ಕೊಹ್ಲಿ ಯಾವ ರೀತಿ ಡಯಟ್ ಮಾಡ್ತಾರೆ ಅನ್ನೋದನ್ನ ನೋಡೋಣ.

ಚೆನ್ನಾಗಿ ತಿನ್ನಿ : ಫ್ರೆಶ್ ಆಗಿ ಮನೆಯಲ್ಲೇ ಮಾಡಿದ ಊಟ ಬೆಸ್ಟ್ ಅಂತಾರೆ ಕೊಹ್ಲಿ. ರೆಸ್ಟೋರೆಂಟ್ ಗಳಲ್ಲಿ ಎಣ್ಣೆಭರಿತ ತಿನಿಸುಗಳನ್ನು ತಿನ್ನುವ ಬದಲು ಮನೆಯಲ್ಲೇ ಹೊಟ್ಟೆ ತುಂಬ ಊಟ ಮಾಡಿ ಅನ್ನೋದು ಅವರ ಸಲಹೆ. ಕಡಿಮೆ ತಿನ್ನೋ ಲಾಜಿಕ್ ನಲ್ಲಿ ಅವರಿಗೆ ನಂಬಿಕೆ ಇಲ್ಲ.

ನೋ ಜಂಕ್ ಫುಡ್ : ಜಂಕ್ ಫುಡ್ ನಿಂದ ಅವರು ದೂರವೇ ಇರ್ತಾರೆ. ಜಂಕ್ ಫುಡ್ ತಿನ್ನೋದು ಅಂದ್ರೆ ಅನಾರೋಗ್ಯವನ್ನು ಆಹ್ವಾನಿಸಿದಂತೆ. ಕರಿದ ಚಿಪ್ಸ್ ತಿನ್ನೋ ಬದಲು ಸಾವಯವ ಗೋಧಿಯ ಕ್ರ್ಯಾಕರ್ಸ್ ಮೆಲ್ಲುವುದು ವಿಶೇಷ.

ಡಯಟ್ : ವಿರಾಟ್ ಡಯಟ್ ನಲ್ಲಿ ಪೋಷಕಾಂಶ ಹೆಚ್ಚಾಗಿರುತ್ತೆ. ಚಿಕನ್, ಮೊಟ್ಟೆ, ಕುರಿ ಹಾಗೂ ಮೀನಿನ ಖಾದ್ಯಗಳು ಅವರ ಫೇವರಿಟ್. ರೆಸ್ಟೋರೆಂಟ್ ಗಳಿಗೆ ಹೋದಾಗಲೆಲ್ಲ ಕುರಿ ಹಾಗೂ ಮೀನಿನ ಖಾದ್ಯಗಳನ್ನೇ ತಿನ್ನುತ್ತಾರೆ. ಯಾಕಂದ್ರೆ ಅವುಗಳಲ್ಲಿ ಪೋಷಕಾಂಶ ಹೆಚ್ಚಾಗಿರುತ್ತದೆ.

ಅಧಿಕ ನೀರು ಸೇವನೆ : ಆರೋಗ್ಯಕ್ಕೆ ನೀರು ಅತ್ಯಂತ ಅವಶ್ಯಕ. ಯಾವುದೇ ಕಲಬೆರಕೆಯಿಲ್ಲದ ಶುದ್ಧ ನೀರು ಕುಡಿಯಬೇಕು ಅನ್ನೋದು ಕೊಹ್ಲಿ ಸಲಹೆ. ಹಾಗಾಗಿ ಯಾವಾಗಲೂ ಅವರು ಕೈಯಲ್ಲಿ ಮಿನರಲ್ ವಾಟರ್ ಬಾಟಲ್ ಇಟ್ಟುಕೊಂಡಿರ್ತಾರಂತೆ.

ಜಿಮ್ : ಆಟಗಾರನಾಗಿರೋದ್ರಿಂದ ಜಿಮ್ ಗೆ ಹೋಗಲೇಬೇಕು. ನಿಯಮಿತ ವ್ಯಾಯಾಮ ಅತ್ಯಗತ್ಯ. ಆಲಸ್ಯ ಮತ್ತು ಸೋಮಾರಿತನವನ್ನು ಬಿಟ್ಟುಬಿಡಬೇಕು ಎನ್ನುತ್ತಾರೆ ವಿರಾಟ್. ವಾರದಲ್ಲಿ 5 ದಿನ ಅವರು ವರ್ಕೌಟ್ ಮಾಡ್ತಾರೆ. ಫಿಟ್ನೆಸ್ ಅವರಿಗೊಂದು ಹವ್ಯಾಸ ಮತ್ತು ಆಸಕ್ತಿಯ ವಿಷಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...