alex Certify ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀತದಿಂದ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ ಸಮಸ್ಯೆಯಿಂದ ದೂರ ಇರಬಹುದು.

* ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಅರಿಶಿಣ ಪುಡಿ ಹಾಕಿ ಕಲಸಿ ಕುಡಿದರೆ ಮೂಗಿನಿಂದ ನೀರು ಸೋರುತ್ತಿದ್ದರೆ ನಿಲ್ಲುತ್ತದೆ.

* ಹಸಿ ಶುಂಠಿಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ಕಷಾಯ ಸ್ವಲ್ಪ ಬೆಚ್ಚಗೆ ಇರುವಾಗ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಪ್ರಯೋಜನವಿದೆ.

* ಬೆಳ್ಳುಳ್ಳಿಯನ್ನು ನೀರಲ್ಲಿ ಚೆನ್ನಾಗಿ ಬೇಯಿಸಿ ಸೂಪ್‌ ಮಾಡಿ. ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಕುಡಿದರೂ ಮೂಗು ಸೋರುವುದು ನಿಲ್ಲುತ್ತದೆ.

* ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಎರಡು ಹನಿ ನೀಲಗಿರಿ ಎಣ್ಣೆ ಹಾಕಿ ಮುಖಕ್ಕೆ ಹಬೆ ತೆಗೆದುಕೊಂಡರೆ ಪ್ರಯೋಜನವಿದೆ.

* ನೀರಿಗೆ ನಿಂಬೆ ರಸ, ಜೇನುತುಪ್ಪ , ಸೈಂಧವ ಉಪ್ಪು ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ಮೂಗು ಸೋರುವ ಸಮಸ್ಯೆ ನಿವಾರಣೆಯಾಗುತ್ತದೆ.

* ಬೆಳಗ್ಗೆ ಖಾಲಿ ಹೊಟ್ಟೆಗೆ ಮತ್ತು ರಾತ್ರಿ ಮಲಗುವ ಮುಂಚೆ 2 ರಿಂದ 3 ತುಳಸಿ ಎಲೆಗಳನ್ನು ಅಗಿದು ತಿಂದರೆ ಪ್ರಯೋಜನವಿದೆ.

* ಬೆಟ್ಟದ ನೆಲ್ಲಿಕಾಯಿ ಪುಡಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ 2 ಬಾರಿ ಸೇವಿಸಿದರೆ ಮೂಗು ಸೋರುವುದು ನಿಲ್ಲುತ್ತದೆ.

* ಹಸುವಿನ ತುಪ್ಪದಲ್ಲಿ ಎಳ್ಳನ್ನು ಹುರಿದು ಅದಕ್ಕೆ ಬೆಲ್ಲ ಸೇರಿಸಿ ಉಂಡೆ ತಯಾರಿಸಿ. ಈ ಉಂಡೆಯನ್ನು ಪ್ರತಿ ದಿನ ಸೇವಿಸಿದರೆ ಮೂಗು ಸೋರುವುದು ನಿಲ್ಲುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...