alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯರಿಗೆ ಪ್ರತಿಕ್ಷಣದ ಮಾಹಿತಿ ನೀಡುತ್ತೆ ಹೈಟೆಕ್ ಬಳೆ

collage_1_1495705168_749x421

ಕೈಗೆ ಹಾಕುವ ಬಳೆ ಗರ್ಭಧಾರಣೆಯ 9 ತಿಂಗಳ ಸಮಯದಲ್ಲಿ ಪ್ರತಿಯೊಂದು ಕ್ಷಣದ ಮಾಹಿತಿಯನ್ನು ನಿಮಗೆ ನೀಡುತ್ತೆ ಎಂದ್ರೆ ನಂಬ್ತೀರಾ? ಬಹುಶಃ ನಂಬಲಿಕ್ಕಿಲ್ಲ. ಆದ್ರೆ ಇದು ಸತ್ಯ. ಕಂಪನಿಯೊಂದು ತಾನು ತಯಾರಿಸಿದ ಬಳೆಯನ್ನು ಗರ್ಭಧಾರಣೆ ವೇಳೆ ಧರಿಸುವ ಸಲಹೆ ನೀಡಿದೆ. ಕೈಗಳ ಸೌಂದರ್ಯ ಹೆಚ್ಚಿಸುವ ಜೊತೆಗೆ ಅದು ಗರ್ಭಧಾರಣೆ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಲಿದೆಯಂತೆ.

ಗ್ರಾಮೀಣ ಇಂಟೆಲ್ ಸೋಷಿಯಲ್ ಬ್ಯುಸಿನೆಸ್ ಹೆಸರಿನ ಕಂಪನಿಯೊಂದು ಈ ಬಳೆಯನ್ನು ತಯಾರಿಸಿದೆ. ಇದು ಕೇವಲ ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಮಾಹಿತಿಯೊಂದೇ ನೀಡುವುದಿಲ್ಲ, ಮಾಲಿನ್ಯದ ಅಪಾಯದ ಬಗ್ಗೆಯೂ ಹೇಳುತ್ತದೆ.

ಭಾರತ ಸೇರಿದಂತೆ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ತಾಯಿ ಮರಣ ಪ್ರಮಾಣ ಜಾಸ್ತಿ ಇದೆ. ಒಂದು ಮಿಲಿಯನ್ ಮಕ್ಕಳ ಜನನದ ವೇಳೆ 175ಕ್ಕೂ ಹೆಚ್ಚು ತಾಯಂದಿರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಆರೋಗ್ಯ ಮಾಹಿತಿಯ ಕೊರತೆ. ಕಂಪನಿ, ಭಾರತ ಹಾಗೂ ಬಾಂಗ್ಲಾದೇಶ ಮಾರುಕಟ್ಟೆಗೆ ಮೊದಲು ತನ್ನ ಬಳೆಯನ್ನು ಬಿಡಲಿದೆ.

ಈ ಬಳೆ ವಾಟರ್ ಪ್ರೂಫ್ ಆಗಿರಲಿದೆ. ಇದೊಂದು ಸ್ಮಾರ್ಟ್ ವಾಚ್ ರೀತಿಯಲ್ಲಿರಲಿದ್ದು, ಹೊರಗಿನ ವಾತಾವರಣ ಹಾಗೂ ಮಹಿಳೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಲಿದೆ. ಕೃಷಿ ಕೆಲಸ, ಒಲೆ ಮುಂದೆ ಅಡುಗೆ ಕೆಲಸ ಮಾಡುವ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಬಳೆಯನ್ನು ತಯಾರಿಸಲಾಗಿದೆ.

ಪ್ಲಾಸ್ಟಿಕ್ ನಿಂದ ಈ ಬಳೆ ತಯಾರಿಸಲಾಗಿದೆ. ಇದು ಬ್ಯಾಟರಿ ಮೂಲಕ ನಡೆಯಲಿದೆ. 10 ತಿಂಗಳ ನಂತ್ರ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಇದ್ರ ಬೆಲೆ 777 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...