alex Certify
ಕನ್ನಡ ದುನಿಯಾ       Mobile App
       

Kannada Duniya

ಜನರನ್ನು ಕಾಡುತ್ತಿದೆ ಮತ್ತೊಂದು ಖಾಯಿಲೆ

Hepatitis-A 334ಮುಂಗಾರು ಮಳೆ ಆರಂಭವಾಯಿತೆಂದರೆ ರೋಗಗಳೂ ಆರಂಭವಾಗುತ್ತವೆ. ಕಳೆದ ವರ್ಷ ಜನರನ್ನು ಡೆಂಘೆ ಮತ್ತು ಚಿಕನ್ ಗೂನ್ಯಾ ರೋಗಗಳು ಕಾಡಿತ್ತು. ಈಗ ಈ ಪಟ್ಟಿಗೆ ‘ಹೆಪಟೈಟಿಸ್ ಎ’ ಸೇರಿಕೊಳ್ಳಲಿದೆ.

ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದಾಗಿ ಯಕೃತ್ತಿಗೆ ಸಂಬಂಧಿಸಿದ ರೋಗವಾದ ಹೆಪಟೈಟಿಸ್ ಎ ರೋಗದ ಲಕ್ಷಣ ಅನೇಕ ಜನರಲ್ಲಿ ಕಾಣಿಸಿಕೊಂಡಿದೆ. ಕಳೆದ ಆರು ತಿಂಗಳಲ್ಲಿ ಬೆಂಗಳೂರಿನಲ್ಲಿ 335, ಬೆಳಗಾವಿಯಲ್ಲಿ 389, ಕಲಬುರ್ಗಿಯಲ್ಲಿ 785 ಹಾಗೂ ಮೈಸೂರಿನಲ್ಲಿ 154 ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.

ಈ ರೋಗ ಹರಡಲು 14 ರಿಂದ 28 ದಿನಗಳು ಬೇಕು. ಈ ರೋಗದ ಆರಂಭದಲ್ಲಿ ಕಾಮಾಲೆ, ಜ್ವರ, ನಿಶ್ಯಕ್ತಿ, ವಾತಿ, ಅತಿಸಾರ ಮುಂತಾದವು ಕಾಣಿಸಿಕೊಳ್ಳುತ್ತವೆ. ಈ ರೋಗದ ಸೋಂಕು ತಗುಲಿದ ಹೆಚ್ಚಿನ ಮಂದಿಗೆ ಕಾಮಾಲೆ ರೋಗದ ಲಕ್ಷಣವಿರುತ್ತದೆ.

ಈ ಸೋಂಕಿನಿಂದ ದೂರವಿರಲು ಜನರು ಕಲುಷಿತ ನೀರು ಮತ್ತು ಆಹಾರದ ಸೇವನೆ ಮಾಡಬಾರದು. ಒಳಚರಂಡಿಯ ನೀರು ಕುಡಿಯುವ ನೀರಿನ ಜೊತೆ ಸೇರುವುದನ್ನು ತಪ್ಪಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...