alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನು ಪ್ರಿಯರನ್ನು ಬೆಚ್ಚಿ ಬೀಳಿಸುವ ಸುದ್ದಿ..!

fish_0

ಮಾಲಿನ್ಯ ಕೇವಲ ಪರಿಸರದಲ್ಲಿ ಮಾತ್ರವಲ್ಲ ನಾವು ಸೇವಿಸುವ ಆಹಾರದಲ್ಲೂ ಮಿತಿಮೀರ್ತಾ ಇದೆ. ‘ನ್ಯಾಶನಲ್ ಇನ್ ಸ್ಟಿಟ್ಯೂಶನ್ ಆಫ್ ನ್ಯೂಟ್ರಿಶನ್’ ಅಧ್ಯಯನದ ಪ್ರಕಾರ ಮೀನಿನಲ್ಲಿ ಅಪಾಯಕಾರಿ ಲೋಹಗಳು ಪತ್ತೆಯಾಗಿವೆ.

ಹೈದ್ರಾಬಾದ್ ಹಾಗೂ ಸಿಕಂದರಾಬಾದ್ ನ ಮಳಿಗೆಗಳಿಂದ ಸಂಗ್ರಹಿಸಿದ ಮೀನುಗಳಲ್ಲಿ ಅರ್ಸೆನಿಕ್, ನಿಕ್ಕಲ್, ಕ್ಯಾಡ್ಮಿಯಂ ಮತ್ತು ಸೀಸದಂತಹ ಭಾರೀ ಲೋಹದ ಅಂಶಗಳು ಪತ್ತೆಯಾಗಿವೆ. ಮೀನಿನ ಖಾದ್ಯಗಳಿಗೆ ಬಳಸುವ ವಿವಿಧ ವೆರೈಟಿ ಮತ್ಸ್ಯಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಕಪ್ಪು ಪೊಂಫ್ರೆಟ್ ಮೀನಿನಲ್ಲಿ ಅತಿ ಹೆಚ್ಚು ಆರ್ಸೆನಿಕ್, ಬೆಳ್ಳಿ ಪೊಂಫ್ರೆಟ್ ಮೀನಿನಲ್ಲಿ ನಿಕ್ಕಲ್ ಪತ್ತೆಯಾಗಿದೆ. ಸೀಗಡಿಗಳಲ್ಲಿ ಸಹ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಸೆನಿಕ್ ಲೋಹದ ಅಂಶವಿದೆ. ಇದು ಕೇವಲ ಹೈದ್ರಾಬಾದ್ ಮೀನುಗಳ ಸ್ಥಿತಿ ಮಾತ್ರವಲ್ಲ, ದೇಶದ ಎಲ್ಲಾ ನದಿ ಮತ್ತು ಸಮುದ್ರಗಳು ಮಲಿನವಾಗಿದ್ದು ಮೀನುಗಳ ದೇಹದಲ್ಲಿ ಅಪಾಯಕಾರಿ ಲೋಹದ ಅಂಶಗಳು ಸೇರಿವೆ. ನೀರಿನಲ್ಲಿ ಕೂಡ ಲೋಹದ ಅಂಶವಿರುತ್ತದೆ ಆದ್ರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ. ಮೀನುಗಳಲ್ಲಿ ಅತಿ ಹೆಚ್ಚು ಲೋಹದ ಅಂಶಗಳಿರೋದಕ್ಕೆ ಕಾರಣ ಮಾಲಿನ್ಯ ಅಂತಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...