alex Certify
ಕನ್ನಡ ದುನಿಯಾ       Mobile App
       

Kannada Duniya

ಕರವಾಚೌತ್ ವೃತಕ್ಕಿಂತ ಮೊದಲು ಪತಿಗೆ ತಿನ್ನಿಸಿ ಈ ಆಹಾರ

ಭಾನುವಾರ ಅಕ್ಟೋಬರ್ 8ರಂದು ಕರವಾಚೌತ್. ಉತ್ತರ ಭಾರತದಲ್ಲಿ ಇದನ್ನು ವಿಶೇಷವಾಗಿ ಆಚರಿಸ್ತಾರೆ. ದಿನವಿಡಿ ಉಪವಾಸವಿದ್ದು ಪತಿಯ ಆಯಸ್ಸು ವೃದ್ಧಿ, ಆರೋಗ್ಯಕ್ಕಾಗಿ ವೃತ ಮಾಡ್ತಾರೆ. ಪತಿ ಕೂಡ ಈ ಸಂದರ್ಭದಲ್ಲಿ ಉಪವಾಸವಿರ್ತಾನೆ. ದಿನಪೂರ್ತಿ ಉಪವಾಸವಿರುವುದ್ರಿಂದ ಆಯಾಸ, ಸುಸ್ತಾಗುವುದು ಸಾಮಾನ್ಯ.

ಉಪವಾಸಕ್ಕಿಂತ ಮೊದಲು ಆರೋಗ್ಯಕರ ಆಹಾರ ಸೇವನೆ ಜೊತೆಗೆ ಆರೋಗ್ಯಕರ ಪಾನೀಯ ಕುಡಿಯುವುದ್ರಿಂದ ಸುಸ್ತು ಬಳಿಗೆ ಬರುವುದಿಲ್ಲ. ಪತಿಯ ಪ್ರೀತಿ ಗಳಿಸಲು ಬಯಸುವ ಪತ್ನಿಯರು ಉಪವಾಸಕ್ಕಿಂತ ಮೊದಲು ಈ ಆಹಾರವನ್ನು ಪತಿಗೆ ಅವಶ್ಯವಾಗಿ ನೀಡಿ.

ಮೊಸರು ಸೇವನೆ ಮಾಡುವುದ್ರಿಂದ ಉಪವಾಸದ ವೇಳೆ ಶಕ್ತಿ ಸಿಗುತ್ತದೆ. ಉಪವಾಸದಲ್ಲಿ ಕಾಡುವ ಸುಸ್ತು ಕಡಿಮೆಯಾಗುತ್ತದೆ.

ಉಪವಾಸಕ್ಕಿಂತ ಮೊದಲು ಬಾಳೆಹಣ್ಣು ತಿನ್ನುವುದ್ರಿಂದ ಆಯಾಸ ಕಡಿಮೆಯಾಗುತ್ತದೆ. ಹಾಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಉಪವಾಸಕ್ಕಿಂತ ಮೊದಲು ಹಾಲು ಕುಡಿಯುವುದು ಒಳ್ಳೆಯದು. ಇದು ನಿಶಕ್ತಿ ಕಡಿಮೆ ಮಾಡುತ್ತದೆ.

ಬಾದಾಮಿಯಲ್ಲಿ ಸಾಕಷ್ಟು ಪೌಷ್ಠಿಕಾಂಶವಿರುತ್ತದೆ. ಇದು ಸುಸ್ತು ಹತ್ತಿರ ಸುಳಿಯದಂತೆ ಮಾಡುತ್ತದೆ.

ದಾಳಿಂಬೆ ಹಣ್ಣಿನಲ್ಲಿ ಎಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ. ಇದು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.

ಎಳನೀರು ಉಪವಾಸವಿರುವವರಿಗೆ ಹೇಳಿ ಮಾಡಿಸಿದ ಆಹಾರ. ಉಪವಾಸದ ಮೊದಲು ಎಳನೀರು ಸೇವನೆ ಮಾಡುವುದ್ರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...