alex Certify
ಕನ್ನಡ ದುನಿಯಾ       Mobile App
       

Kannada Duniya

ಒತ್ತಡ ಕಡಿಮೆ ಮಾಡುತ್ತೆ ಒಳ್ಳೆ ಉಪಹಾರ

breakfast_s

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ ಕೂಡ ಜಾಸ್ತಿಯಾಗ್ತಾ ಇದೆ. ಒತ್ತಡ ಕಡಿಮೆ ಮಾಡುವಲ್ಲಿ ನಮ್ಮ ಆಹಾರ ಒಳ್ಳೆಯ ಔಷಧ ಎಂದ್ರೆ ತಪ್ಪಾಗಲಾರದು.

ಬೆಳಗಿನ ಉಪಹಾರ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಉತ್ತಮ ಉಪಹಾರ ಮಾಡುವವರು, ಇತರರಿಗಿಂತ ಕಡಿಮೆ ಒತ್ತಡದಲ್ಲಿ ಇರುತ್ತಾರಂತೆ. ಅಧ್ಯಯನದ ಪ್ರಕಾರ ಉತ್ತಮ ಉಪಹಾರ ಸೇವಿಸುವವರು ಉದ್ವಿಗ್ನ ಪರಿಸ್ಥಿತಿಯಲ್ಲಿ ಶೇಕಡಾ 80 ರಷ್ಟು ಒತ್ತಡ ರಹಿತರಾಗಿರ್ತಾರಂತೆ. ಲಘು ಉಪಹಾರ ಮಾಡುವವರು ಗೊಂದಲ ಪರಿಸ್ಥಿತಿಯಲ್ಲಿ ಶೇಕಡಾ 7 ರಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರಂತೆ.

ಸತತ ಎರಡು ದಿನಗಳ ಕಾಲ ಕೆಲವರ ಮೇಲೆ ಸಂಶೋಧನೆ ನಡೆಸಲಾಯ್ತು. ಒಂದು ದಿನ ಉಪಹಾರ ನೀಡಿದ್ರೆ ಮತ್ತೊಂದು ದಿನ ಉಪಹಾರ ನೀಡದೆ ಅಧ್ಯಯನ ನಡೆಸಲಾಯ್ತು. ಇದ್ರಲ್ಲಿ ಉಪಹಾರ ಮಾಡಿದ ದಿನ ಪರೀಕ್ಷೆಯಲ್ಲಿ ಶೇಕಡಾ 61ರಷ್ಟು ಫಲಿತಾಂಶ ಬಂತು.

ಉಪಹಾರ ಮಾಡದ ಮಂದಿ ಪರೀಕ್ಷೆಯನ್ನು ಸರಿಯಾಗಿ ಎದುರಿಸಲಾಗಲಿಲ್ಲ ಎಂಬುದನ್ನು ಒಪ್ಪಿಗೊಂಡಿದ್ದಾರೆ. ಬ್ರಿಟನ್ ನಲ್ಲಿ 2 ಸಾವಿರ ಮಂದಿ ಮಾತನಾಡಿಸಿದಾಗ ಅದ್ರಲ್ಲಿ ಶೇಕಡಾ 48ರಷ್ಟು ಮಂದಿ ಉಪಹಾರ ಸೇವಿಸುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉಪಹಾರ ಸೇವಿಸದ ಮಂದಿ ಸದಾ ಒತ್ತಡದಲ್ಲಿರ್ತಾರೆ. ಕೆಲಸದ ಮೇಲೆ ಗಮನ ನೀಡುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅದ್ರಲ್ಲೂ 25 ರಿಂದ 34 ವರ್ಷ ವಯಸ್ಸಿನವರ ಮೇಲೆ ಇದ್ರ ಪರಿಣಾಮ ಜಾಸ್ತಿ ಇರುತ್ತದೆ ಎಂದು ಅಧ್ಯಯನ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...