alex Certify
ಕನ್ನಡ ದುನಿಯಾ       Mobile App
       

Kannada Duniya

ವಯಸ್ಸು 50 ಆದ್ರೂ ಮಗು ಪಡೆಯೋದು ಈಗ ಸಾಧ್ಯ

ಎರಡನೇ ಮಗುವಿಗೆ ಪ್ಲಾನ್ ಮಾಡುತ್ತಿರುವವರು ಅಥವಾ ಒಂದನೇ ಮಗುವೇ ಇನ್ನೂ ಆಗಿಲ್ಲ ಎನ್ನುವ 50 ವರ್ಷ ವಯಸ್ಸಿನ ಮಹಿಳೆಯರು ಚಿಂತೆ ಮಾಡಬೇಕಾಗಿಲ್ಲ. 50 ನೇ ವಯಸ್ಸಿನಲ್ಲಿಯೂ ಮಗು ಪಡೆಯುವುದು ತಂತ್ರಜ್ಞಾನಗಳಿಂದ ಸಾಧ್ಯವಾಗ್ತಿದೆ. ಸಾಮಾನ್ಯವಾಗಿ 50 ರ ಆಸುಪಾಸಿನಲ್ಲಿ ಮುಟ್ಟು ನಿಲ್ಲುತ್ತದೆ. ಆದ್ರೆ ಆ ವೇಳೆಯೂ ಮಕ್ಕಳನ್ನು ಪಡೆಯಬಹುದೆಂದು ವೈದ್ಯರು ಹೇಳ್ತಾರೆ.

30 ನೇ ವಯಸ್ಸಿನ ಆಸುಪಾಸಿನಲ್ಲಿ ಮಕ್ಕಳನ್ನು ಪಡೆಯುವುದು ಸುಲಭ. ವಯಸ್ಸು ಹೆಚ್ಚಾಗ್ತಿದ್ದಂತೆ ಸಮಸ್ಯೆ ಹೆಚ್ಚಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಯಸ್ಸಿನವರು ಮಕ್ಕಳನ್ನು ಪಡೆಯುತ್ತಿದ್ದಾರೆ. ಅಸಾಧ್ಯವಾದದ್ದು ಯಾವುದೂ ಇಲ್ಲ. ಆದ್ರೆ ವಯಸ್ಸು ಹೆಚ್ಚಾದಂತೆ ಗರ್ಭಿಣಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಸಮಯಕ್ಕಿಂತ ಮೊದಲು ಹೆರಿಗೆ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.

ತಂತ್ರಜ್ಞಾನ ಹಾಗೂ ವೈದ್ಯಕೀಯ ವಿಜ್ಞಾನ ಪ್ರಗತಿ ಸಾಧಿಸಿದೆ. 40 ನೇ ವಯಸ್ಸಿನಲ್ಲಿಯೂ ಈಗ ಮಕ್ಕಳನ್ನು ಪಡೆಯಬಹುದಾಗಿದೆ. 3 ವಿಧಾನಗಳಲ್ಲಿ ಮಕ್ಕಳನ್ನು ಪಡೆಯಲು ಅವಕಾಶವಿದೆ. ಒಂದು ಪ್ರಾಕೃತಿಕ ರೂಪದಲ್ಲಿ ಗರ್ಭಧಾರಣೆ. ಎರಡನೇಯದು ಐವಿಎಫ್ ವಿಧಾನದ ಮೂಲಕ ಸ್ವಂತ ಎಗ್ ಬಳಕೆ. ಮೂರನೇಯದು ಐವಿಎಫ್ ತಂತ್ರಜ್ಞಾನದ ಮೂಲಕ ಬೇರೆಯವರ ಎಗ್ ಬಳಕೆ.

ಗರ್ಭಧಾರಣೆ ವಾಸ್ತವಿಕವಾಗಿ ಮಹಿಳೆಯರ ವಯಸ್ಸಿನ ಮೇಲೆ ನಿಂತಿದೆ. ಫಿಟ್ ಆಗಿರಲು ಮಹಿಳೆಯರು ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಅದ್ರ ಅಸಲಿಯತ್ತು 30 ರ ನಂತ್ರ ಗರ್ಭ ಧರಿಸಿದಾಗ ಗೊತ್ತಾಗುತ್ತದೆ. 30 ರ ನಂತ್ರ ಸ್ವಾಭಾವಿಕವಾಗಿ ಗರ್ಭಧಾರಣೆ ಕಷ್ಟವಾಗ್ತಾ ಬರುತ್ತದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯಕರ ಎಗ್ ಗಳ ಸಂಖ್ಯೆ ಕಡಿಮೆಯಾಗುತ್ತದೆ. 50ರ ನಂತ್ರ ಮಗು ಬಯಸುವವರಿಗೆ ವೈದ್ಯರು ಬೇರೆಯವರ ಎಗ್ ಮೂಲಕ ಐವಿಎಫ್ ಪ್ರಯತ್ನಕ್ಕೆ ಕೈ ಹಾಕ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...