alex Certify
ಕನ್ನಡ ದುನಿಯಾ       Mobile App
       

Kannada Duniya

ಮಧುಮೇಹ ನಿಯಂತ್ರಣಕ್ಕೆ ಉತ್ತಮ ಈ 10 ವಿಧದ ಹಣ್ಣುಗಳು

Fruits-to-control-Diabetes

ನೇರಳೆ ಹಣ್ಣು: ನೇರಳೆ ಹಣ್ಣು ಮಧುಮೇಹವಿದ್ದವರಿಗೆ ರಾಮ ಬಾಣವಿದ್ದಂತೆ ಎನ್ನುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆಯಲ್ಲದೇ ಇದರ ಬೀಜವನ್ನು ಪೌಡರಿನಂತೆ ಅರೆದು ನೀರಿನಲ್ಲಿ ಬೆರೆಸಿ ಕುಡಿದರೆ ಮಧುಮೇಹ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ.

ಸೀಬೆ: ಸೀಬೆಕಾಯಿಯಲ್ಲಿ ವಿಟಮಿನ್ ‘ಎ’ ಮತ್ತು ವಿಟಮಿನ್ ‘ಸಿ’ ಇರುವುದರಿಂದ ಪ್ರತಿಯೊಬ್ಬರ ಆರೋಗ್ಯಕ್ಕೆ ಸಹಕಾರಿ. ಇದರಲ್ಲಿ ಗ್ಲುಕೋಸ್ ಅಂಶ ಕಡಿಮೆ ಇರುವುದರಿಂದ ಮಧುಮೇಹಿ ರೋಗಿಗಳಿಗೂ ಅಷ್ಟು ತೊಂದರೆಯಾಗುವುದಿಲ್ಲ.

ಸ್ಟಾರ್ ಫ್ರೂಟ್: ಸ್ಟಾರ್ ಫ್ರೂಟ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಲ್ಲದೇ ಮಧುಮೇಹಿ ರೋಗಿಗಳಿಗೆ ಇದು ಉತ್ತಮ.

ಕಿವಿ ಹಣ್ಣು: ಕಿವಿ ಹಣ್ಣು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ.

ಪಪ್ಪಾಯ: ಮಧುಮೇಹಿ ರೋಗಿಗಳಿಗೆ ಪಪ್ಪಾಯ ಉತ್ತಮವಾದ ಹಣ್ಣು ಎಂದೇ ಹೇಳಲಾಗುತ್ತದೆ. ಅಲ್ಲದೇ ಇದರಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೇರಳವಾಗಿದೆ.

ದಾಳಿಂಬೆ: ದಾಳಿಂಬೆ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್ ದೊರೆಯುತ್ತದೆ. ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ.

ಕಿತ್ತಳೆ: ಕಿತ್ತಳೆ ಹಣ್ಣಿನ ಮೂಲಕ ದೇಹಕ್ಕೆ ವಿಟಮಿನ್ ಸಿ ಲಭ್ಯವಾಗಲಿದೆಯಲ್ಲದೇ ಮಧುಮೇಹಿ ರೋಗಿಗಳು ಇದನ್ನು ನಿತ್ಯ ಸೇವಿಸುವುದು ಒಳ್ಳೆಯದೆನ್ನುತ್ತಾರೆ.

ಹಲಸಿನ ಹಣ್ಣು: ಹಲಸಿನ ಹಣ್ಣಿನಲ್ಲಿ ಹೇರಳವಾದ ವಿಟಮಿನ್ ಗಳಿದ್ದು ಎ ಮತ್ತು ಸಿ ಯಲ್ಲದೇ ಕ್ಯಾಲ್ಸಿಯಂ, ಪೋಟ್ಯಾಶಿಯಂ, ಮೆಗ್ನಿಶೀಯಂ ಮೊದಲಾದವು ಸಹ ದೇಹಕ್ಕೆ ದೊರೆಯುತ್ತದೆ.

ಆನಾನಸ್: ಆನಾನಸ್ ಹಣ್ಣು ಮಧುಮೇಹಿ ರೋಗಿಗಳಿಗೆ ಉತ್ತಮ ಎಂದು ಹೇಳಲಾಗುತ್ತದೆಯಲ್ಲದೇ ಇದರಲ್ಲಿರುವ ರೋಗ ನಿರೋಧಕ ಶಕ್ತಿಯ ಕಾರಣಕ್ಕೆ ಇದನ್ನು ಸೇವಿಸುವುದು ಒಳ್ಳೆಯದು.

ಕಲ್ಲಂಗಡಿ: ಕಲ್ಲಂಗಡಿಯಲ್ಲಿ ನೀರಿನಂಶ ಹೆಚ್ಚಾಗಿರುವ ಕಾರಣ ದೇಹಕ್ಕೆ ತಂಪು ನೀಡುವಲ್ಲಿ ಸಹಕಾರಿ. ಮಧುಮೇಹಿ ರೋಗಿಗಳು ಇದನ್ನು ವಿಚಾರ ಮಾಡಿ ಸೇವಿಸುವುದು ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...