alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲೋರಿಡಾದಲ್ಲಿ ಜನಿಸಿದೆ ಭಾರೀ ತೂಕದ ಮಗು

girl-kg

ಗರ್ಭಾವಸ್ಥೆ ಅತ್ಯಂತ ಕಠಿಣ ಸಮಯ. ಅದರಲ್ಲೂ ಹೊಟ್ಟೆಯಲ್ಲಿರೋ ಮಗುವಿನ ತೂಕ ನಿರೀಕ್ಷೆಗಿಂತ್ಲೂ ಹೆಚ್ಚಾಗಿದ್ರೆ ಹೆರಿಗೆಯಲ್ಲಿ ಸಮಸ್ಯೆಯಾಗುತ್ತದೆ. ಅಮೆರಿಕದ ಫ್ಲೋರಿಡಾದಲ್ಲಿ ಮಹಿಳೆಯೊಬ್ಳು 13 ಪೌಂಡ್ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ. ಸಿಸೇರಿಯನ್ ಮೂಲಕ ಆಕೆಗೆ ಹೆರಿಗೆ ಮಾಡಲಾಗಿದೆ.

ಫ್ಲೋರಿಡಾ ಮೂಲದ ಕ್ರಿಸ್ಟಿನ್ ಕಾರ್ಬಿಟ್ ಎಂಬಾಕೆಗೆ ಈ ಹಿಂದೆ ಜನಿಸಿದ್ದ ಮಕ್ಕಳ ತೂಕ ಕೂಡ ಅಧಿಕವೇ ಇತ್ತು. ಹುಟ್ಟಿದಾಗ ಆ ಮಕ್ಕಳು ತಲಾ 9 ಮತ್ತು 10 ಪೌಂಡ್ ತೂಕವಿದ್ದವು. ಆದ್ರೆ ಮೂರನೇ ಮಗು 13 ಪೌಂಡ್ ತೂಕ ಇರಬಹುದೆಂಬ ಕಲ್ಪನೆಯೂ ಅವಳಿಗಿರಲಿಲ್ಲ.

ವೈದ್ಯರು ಕೂಡ ಮಗುವಿನ ತೂಕ ನೋಡಿ ಅಚ್ಚರಿಪಟ್ಟಿದ್ದಾರೆ. ಈಗತಾನೆ ಹುಟ್ಟಿದ ಶಿಶು ಅಂಬೆಗಾಲಿಡುವ ಮಗುವಿನಂತೆ ಕಾಣ್ತಾ ಇದೆ. ಆದ್ರೆ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಹೆಣ್ಣುಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಇಬ್ಬರೂ ಆರೋಗ್ಯವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...