alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಗಾಗಿ ಆರಂಭವಾಗಿದೆ ಹೊಸ ವ್ಯಾಯಾಮ

3108CHINA-TREND

ಬದಲಾಗುತ್ತಿರುವ ಜೀವನ ಶೈಲಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾರ್ಕ್ ಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಗಿಂಗ್, ವ್ಯಾಯಾಮದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದರೆ ಚೀನಾದಲ್ಲಿ ಆರಂಭವಾಗಿರುವ ಕಸರತ್ತು ಕುತೂಹಲಕ್ಕೆ ಕಾರಣವಾಗಿದೆ.

ಯೋಗ, ವಿಶ್ವದಾದ್ಯಂತ ಹೆಸರು ಮಾಡುತ್ತಿದ್ದು, ಈ ನಡುವೆಯೇ ಚೀನಾ ಪರ್ವತದ ತುತ್ತ ತುದಿಯಲ್ಲಿ ಯೋಗ ಆರಂಭಿಸುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಕೆಲವರು ನೀರಿನಲ್ಲಿಯೂ ಯೋಗ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು.

ಆದರೆ ಚೀನಾದ ಜೆಂಗ್‍ ಶೂ ನಗರದ ಹೆನಾನ್ ಪ್ರಾಂತ್ಯದಲ್ಲಿ ಆರಂಭವಾಗಿರುವ ಟ್ರೆಂಡ್‍ ಚೀನಿಯರನ್ನು ಮಾತ್ರವಲ್ಲ, ವಿಶ್ವದ ಎಲ್ಲರ ಗಮನ ಸೆಳೆದಿದೆ. ಜಾಗಿಂಗ್ ಗೆ ಬದಲಾಗಿ ಕೈಗಳನ್ನು ನೆಲಕ್ಕೆ ಊರಿಕೊಂಡು ಮಾಡುವ ಹೊಸ ನಡಿಗೆಯೊಂದನ್ನು ಆರಂಭಿಸಿದ್ದು, ಕಪ್ಪೆ ಓಟದಂತೆ ಈ ನಡಿಗೆ ಕಂಡು ಬರುತ್ತದೆ.

ಅಲ್ಲದೇ ದೇಹವನ್ನು ಹಿಂದಕ್ಕೆ ಬಾಗಿಸಿ, ಕೈಗಳ ಸಹಾಯದಿಂದ ನಡೆದುಕೊಂಡು ಮಾಡುವ ಈ ವ್ಯಾಯಾಮ ಫಿಟ್ನೆಸ್‍ ಗೆ ಅತ್ಯುತ್ತಮವಾಗಿದ್ದು, ಮಾತ್ರವಲ್ಲ ಕೈ ಕಾಲುಗಳಿಗೆ ಉತ್ತಮ ವ್ಯಾಯಾಮವಾಗುವುದಲ್ಲದೇ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದು ಇದನ್ನು ಮಾಡುವವರ ವಾದ. ಇನ್ನು ಕೆಲವರು ಹೇಳುವ ಪ್ರಕಾರ ಈ ರೀತಿ ಮಾಡುವುದರಿಂದ ಅವರ ಬಿಪಿ ಕೂಡ ಕಡಿಮೆಯಾಗಿದ್ದು, ಒಟ್ಟಾರೆ ಈ ವ್ಯಾಯಾಮ ಹೊಸ ಟ್ರೆಂಡ್ ಮೂಡಿಸಿದ್ದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...