alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕನ್ ಗುನ್ಯಾಕ್ಕೆ ದೆಹಲಿಯಲ್ಲಿ ಓರ್ವ ಬಲಿ

First Chikungunya Death Reported In Delhiಸೊಳ್ಳೆಯಿಂದ ಹರಡುವ ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಈಗ ದೆಹಲಿಯಲ್ಲಿ ಹಬ್ಬುತ್ತಿದೆ. ಚಿಕನ್ ಗುನ್ಯಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಚಿಕನ್ ಗುನ್ಯಾ ದೆಹಲಿಯಲ್ಲಿ ತನ್ನ ಮೊದಲ ಬಲಿ ಪಡೆದಿದೆ.

ಚಿಕನ್ ಗುನ್ಯಾ ಪೀಡಿತ 62 ವರ್ಷದ ಆರ್. ಪಾಂಡೆ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿಯ ಹೊರತಾಗಿ ಇನ್ನೂ ಇಬ್ಬರು ಐಸಿಯು ನಲ್ಲಿದ್ದಾರೆ. ಈ ಪೈಕಿ ಒಬ್ಬ ಡೆಂಗ್ಯೂ ಮತ್ತೊಬ್ಬ ಚಿಕನ್ ಗುನ್ಯಾದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಈ ವರ್ಷ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 36 ಡೆಂಗ್ಯೂ ರೋಗಿಗಳು, 65 ಚಿಕನ್ ಗುನ್ಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...