alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕಿನಿಂದ್ಲೂ ಹರಡ್ತಾ ಇದೆ ಹಕ್ಕಿ ಜ್ವರ..!

girl-1361132_960_720

ಬೆಕ್ಕು ಅಂದ್ರೆ ಎಲ್ಲರೂ ಇಷ್ಟಪಡ್ತಾರೆ, ಮನೆಯಲ್ಲಿ ಪ್ರೀತಿಯಿಂದ ಸಾಕ್ತಾರೆ. ಬೆಕ್ಕನ್ನು ಎತ್ತಿಕೊಂಡು ಮುದ್ದಿಸ್ತಾರೆ. ಆದ್ರೆ ಈಗ ಶಾಕಿಂಗ್ ಸುದ್ದಿ ಒಂದಿದೆ, ಬೆಕ್ಕುಗಳಿಂದ ಮನುಷ್ಯರಿಗೆ ಹಕ್ಕಿ ಜ್ವರ ಹರಡ್ತಾ ಇದೆ.

ಅಮೆರಿಕದ ಪ್ರಾಣಿಗಳ ಶಿಬಿರದಲ್ಲಿರುವ 100ಕ್ಕೂ ಹೆಚ್ಚು ಬೆಕ್ಕುಗಳಿಗೆ ಬರ್ಡ್ ಫ್ಲೂ ಇತ್ತು, ಇದೀಗ ಶೆಲ್ಟರ್ ನಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಪಶುವೈದ್ಯರೊಬ್ಬರಿಗೆ ಹಕ್ಕಿ ಜ್ವರದ ಸೋಂಕು ತಗುಲಿದೆ.

ಅನಿಮಲ್ ಕೇರ್ ಸೆಂಟರ್ ನಲ್ಲಿದ್ದ ಬೆಕ್ಕುಗಳಿಗೆ ಇನ್ ಫ್ಲೂಯೆಂಜಾ ಎ ವೈರಸ್ ಹರಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೀತಾ ಇದೆ, ಆದ್ರೆ ಅದ್ರಿಂದ ಮನುಷ್ಯರಿಗೆ ಅಷ್ಟೇನೂ ಅಪಾಯವಿಲ್ಲ ಅಂತಾ ವಿಜ್ಞಾನಿಗಳು ಭರವಸೆ ನೀಡಿದ್ದಾರೆ.

ಹಕ್ಕಿ ಜ್ವರದ ಸೋಂಕು ತಗುಲಿದ್ದ ಪಶುವೈದ್ಯ ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಕ್ಕುಗಳಿಗೆ ಚಿಕಿತ್ಸೆ ನೀಡುತ್ತಿದ್ರು. ಈ ವೇಳೆ ಅವರಿಗೂ ಎಫೆಕ್ಟ್ ಆಗಿತ್ತು ಅಂತಾ ಹೇಳಲಾಗಿದೆ. ಬೆಕ್ಕುಗಳಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಸ್ವಲ್ಪ ಕೇರ್ ಫುಲ್ ಆಗಿರುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಒಟ್ಟು 100 ಬೆಕ್ಕುಗಳಲ್ಲಿ H7N2 ಸೋಂಕು ತಗುಲಿದ್ದು, ಒಂದು ಬೆಕ್ಕು ಮೃತಪಟ್ಟಿದೆ. ಹಕ್ಕಿ ಜ್ವರ ತಗುಲಿರೋ ಬೆಕ್ಕುಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...