alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಪೀಡಿತ ತಂದೆಗೆ ಎದೆ ಹಾಲು ನೀಡಿ ಮರು ಜೀವ ನೀಡಿದ ಮಗಳು

breast-cancer-4_051617044225

ನವಜಾತ ಮಕ್ಕಳಿಗೆ ತಾಯಿ ಹಾಲು ಬಹಳ ಮುಖ್ಯ. ಈ ವಿಷ್ಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಕ್ಯಾನ್ಸರ್ ಗೂ ಎದೆಹಾಲು ಮದ್ದು ಎನ್ನುವ ವಿಷಯ ನಿಮಗೆ ಗೊತ್ತಾ?

ಸ್ವಿಡನ್ ಪ್ರೊಫೆಸರ್ ಒಬ್ಬರು ತಾಯಿಯ ಹಾಲು ಕ್ಯಾನ್ಸರ್ ಶಮನ ಮಾಡಲು ಸಾಧ್ಯವೆಂದು ವಾದಿಸಿದ್ದಾರೆ. ಎದೆ ಹಾಲಿನಲ್ಲಿರುವ ಒಂದು ಪದಾರ್ಥಕ್ಕೆ ಕ್ಯಾನ್ಸರ್ ಗಡ್ಡೆ ಕೊಲ್ಲುವ ಶಕ್ತಿ ಇದೆ. ಕೆಥರಿನಾ ಪ್ರಕಾರ, 2015 ರಲ್ಲಿ 64 ವರ್ಷದ ಫ್ರೆಡ್ ವೈಟ್ ಲಾ ಬೊವಲ್ ಕ್ಯಾನ್ಸರ್ ಪೀಡಿತರಾಗಿದ್ದರು. ಈ ವಿಷ್ಯ 30 ವರ್ಷದ ಮಗಳಿಗೆ ತಿಳಿಯಿತು. ತಂದೆ ಖಾಯಿಲೆ ಆಕೆಗೆ ಭಯ ಹುಟ್ಟಿಸಿತ್ತು.

ಮಗಳು ಜಿಲ್, ತಾಯಿಯ ಎದೆ ಹಾಲಿಗೆ ಕ್ಯಾನ್ಸರ್ ಶಮನ ಮಾಡುವ ಶಕ್ತಿ ಇದೆ ಎಂಬುದನ್ನು ಓದಿದ್ದಳು. ಈ ಬಗ್ಗೆ ಮನೆಯವರಿಗೆ ಹೇಳಿದ್ದಾಳೆ. ಆದ್ರೆ ಮನೆಯವರು ಮೊದಲು ಜೋಕ್ ಎಂದುಕೊಂಡಿದ್ದರಂತೆ. ಆದ್ರೆ ಕುಟುಂಬದವರಿಗೆ ತಿಳಿಸಿ ಹೇಳಿದ್ದಾಳೆ ಜಿಲ್. ತಂದೆ ಎದೆ ಹಾಲು ಕುಡಿಯುವುದಿಲ್ಲ ಎನ್ನುವ ಭಯ ಕೂಡ ಆಕೆಗಿತ್ತಂತೆ. ಆದ್ರೆ ತಂದೆಯ ಮನವೊಲಿಸಲು ಯಶಸ್ವಿಯಾದ ಜಿಲ್ ತನ್ನ ಎದೆಹಾಲನ್ನು ತಂದೆಗೆ ನೀಡಿದ್ದಾಳೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಫ್ರೆಡ್ ಈಗ ಆರೋಗ್ಯವಾಗಿದ್ದಾರೆ.

ತಂದೆ ಜೊತೆಗೆ ಜಿಲ್ ಪತಿ ಎಸ್ಜಿಮಾ ಖಾಯಿಲೆಗೆ ಎದೆ ಹಾಲನ್ನು ಔಷಧಿ ರೂಪದಲ್ಲಿ ಬಳಸ್ತಿದ್ದರು. ಕೆಥರಿನಾ Lund Universityಯಲ್ಲಿ ಪ್ರೊಫೆಸರ್ ಆಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈ ವಿಷಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ ಜಿಲ್. ಮೂತ್ರಕೋಶ ಕ್ಯಾನ್ಸರ್ ಪೀಡಿತರಿಗೆ ಇದು ಒಳ್ಳೆಯ ಮದ್ದು ಎಂಬುದು ಕ್ಯಾಥರಿನ್ ಅಭಿಪ್ರಾಯ. ಇತರ ರೋಗಿಗಳೂ ಈ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ಪಡೆದಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...