alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಪೀಡಿತ ತಂದೆಗೆ ಎದೆ ಹಾಲು ನೀಡಿದ ಮಗಳು

breast-cancer-4_051617044225

ನವಜಾತ ಶಿಶುಗಳಿಗೆ ತಾಯಿ ಹಾಲು ಬಹಳ ಮುಖ್ಯ. ಈ ವಿಷ್ಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದ್ರೆ ಎದೆ ಹಾಲು ಕ್ಯಾನ್ಸರ್ ಗೆ ರಾಮಬಾಣ ಎಂಬುದು ನಿಮಗೆ ಗೊತ್ತಾ?

ಸ್ವೀಡನ್ ನ ಪ್ರಾಧ್ಯಾಪಕರೊಬ್ಬರು ಕ್ಯಾನ್ಸರ್ ಗೆ ಎದೆ ಹಾಲು ಉತ್ತಮ ಔಷಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಂಶೋಧನೆ ಪ್ರಕಾರ ಎದೆ ಹಾಲಿನಲ್ಲಿ ಹ್ಯಾಮ್ಲೆಟ್ ಅಂಶವಿರುತ್ತದೆ. ಇದು ಕ್ಯಾನ್ಸರ್ ಗಡ್ಡೆಯನ್ನು ನಾಶಪಡಿಸಲು ನೆರವಾಗುತ್ತದೆ.

ಪ್ರಾಧ್ಯಾಪಕಿ ಕ್ಯಾಥೆರಿನಾ ಪ್ರಕಾರ 2015ರಲ್ಲಿ 64 ವರ್ಷದ ಫ್ರೆಡ್ ವೈಟ್ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ. ಈ ವಿಷ್ಯ 30 ವರ್ಷದ ಮಗಳು ಜಿಲ್ ಗೆ ಗೊತ್ತಾಯ್ತಂತೆ. ತಂದೆ ರೋಗಕ್ಕೆ ಭಯಗೊಂಡಿದ್ದ ಜಿಲ್ ಗೆ ಎದೆ ಹಾಲಿನ ಮೇಲೆ ನಡೆದ ಸಂಶೋಧನೆ ಬಗ್ಗೆ ತಿಳಿಯಿತಂತೆ. ಕುಟುಂಬದವರ ಜೊತೆ ಹಾಗೂ ತಂದೆ ಜೊತೆ ಮಾತನಾಡಿ ತನ್ನ ಎದೆ ಹಾಲನ್ನು ತಂದೆಗೆ ನೀಡುತ್ತ ಬಂದಳಂತೆ ಜಿಲ್. ಈಗ ತಂದೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರಂತೆ.

ಜಿಲ್ ತಂದೆ ಜೊತೆ ಪತಿ ಕೂಡ ಎದೆ ಹಾಲು ಕುಡಿಯುತ್ತಿದ್ದಾರೆ. ಜಿಲ್ ಪತಿ ಎಸ್ಜಿಮಾ ಖಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೂ ಔಷಧಿಯಾಗಿದೆ ಎದೆ ಹಾಲು. ಅನೇಕ ವರ್ಷಗಳಿಂದ ಪ್ರಾಧ್ಯಾಪಕಿ ಕ್ಯಾಥೆರಿನಾ ಎದೆ ಹಾಲಿನ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...