alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ವರ್ಷ ಈ ಕಾರಣಕ್ಕಾಗಿ ಸಾವನ್ನಪ್ಪುತ್ತಿದ್ದಾರೆ 6 ಲಕ್ಷ ಭಾರತೀಯರು

salt

ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಹಾಗೂ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಪ್ರತಿ ವರ್ಷ 6 ಲಕ್ಷ ಮಂದಿ ಭಾರತೀಯರು ತಮಗರಿವಿಲ್ಲದಂತೆ ಸಾವನ್ನಪ್ಪುತ್ತಿದ್ದಾರೆಂಬ ಮಾಹಿತಿ ಹೊರಗೆಡವಿದೆ. ಅದರ ವಿವರ ಇಲ್ಲಿದೆ ನೋಡಿ.

ಈ ಸಾವಿಗೆ ಸ್ವಯಂಕೃತ ಅಪರಾಧ ಕಾರಣವಲ್ಲ ಬದಲಾಗಿ ಅರಿವಿಲ್ಲದಂತೆ ಸಾವನ್ನು ಆಹ್ವಾನ ಮಾಡಿಕೊಳ್ಳುತ್ತಿದ್ದಾರೆಂಬ ಅಂಶ ಬಯಲಾಗಿದೆ. ಉಪ್ಪಿನಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಿರುವ ಕಾರಣ ಈ ಸಾವುಗಳು ಸಂಭವಿಸುತ್ತಿವೆ ಎಂದು ಹೇಳಲಾಗಿದೆ.

ತಾವು ಖರೀದಿಸಿದ ಉತ್ಪನ್ನಗಳು ಅಥವಾ ಸೇವಿಸುವ ಆಹಾರ ಪದಾರ್ಥದಲ್ಲಿ ಉಪ್ಪಿನ ಪ್ರಮಾಣ ಜಾಸ್ತಿಯಾದ ಪಕ್ಷದಲ್ಲಿ ರಕ್ತದೊತ್ತಡ ಏರುಪೇರಾಗಿ ಈ ಸಾವುಗಳು ಸಂಭವಿಸುತ್ತಿವೆ ಎನ್ನಲಾಗಿದೆ. ಶುಗರ್ ಸಮಸ್ಯೆಗೆ ಮಾತ್ರ ಮಹತ್ವ ಕೊಡುತ್ತಿರುವ ಭಾರತೀಯರು ಉಪ್ಪಿನ ಪರಿಣಾಮಗಳನ್ನು ನಿರ್ಲಕ್ಷಿಸುತ್ತಿರುವುದೇ ಈ ಸಾವಿಗೆ ಕಾರಣವೆಂಬುದು ಅಧ್ಯಯನದಲ್ಲಿ ಕಂಡು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...