alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಬಳಕೆಯಿಂದಾಗುವ ಮಾನಸಿಕ ಪರಿಣಾಮಗಳು

ಇತ್ತೀಚಿನ ವರ್ಷಗಳಲ್ಲಿ ಫೇಸ್‌ ಬುಕ್‌ ಎಂಬುದು ಪ್ರತಿಯೊಬ್ಬರು ಹೊಂದಿರಲೇಬೇಕಾದ ಜಾಲತಾಣ ಎಂಬಂತಾಗಿಬಿಟ್ಟಿದೆ. ಓರ್ವ ವ್ಯಕ್ತಿ ತಾನೇ ತನ್ನ ಬಗ್ಗೆ ತನ್ನ ಕುಟುಂಬ, ವಿದ್ಯೆ, ಕೆಲಸಗಳ ಬಗ್ಗೆ, ತನ್ನ ಹವ್ಯಾಸಗಳ ಬಗ್ಗೆ, ತನ್ನ ಯೋಚನಾ ಕ್ರಮದ ಬಗ್ಗೆ ಜನರಿಗೆ ತಿಳಿಸಿಕೊಡುವ ವೇದಿಕೆಯಾಗಿದೆ. ಫೇಸ್‌ ಬುಕ್‌ನಲ್ಲಿ ತನ್ನ ಬಗ್ಗೆ ತಾನು ಒಳ್ಳೆಯದನ್ನ ಮಾತ್ರ ಹೇಳಿಕೊಳ್ಳುವುದರಿಂದ ನಮ್ಮಲ್ಲಿ ಆತ್ಮಗೌರವ ಬೆಳೆಯುತ್ತದೆ ಆದರೆ, ಅದೇ ವ್ಯಕ್ತಿಯಲ್ಲಿರುವ ಸ್ವಯಂಪ್ರೇರಣೆ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಮೆರಿಕದ ಯೂ ಡಬ್ಲ್ಯೂ ಮ್ಯಾಡಿಸನ್‌ನ ಮೀಡಿಯಾ ಸೈಕಾಲಜಿ ಅಧ್ಯಯನದ ಪ್ರಮುಖ ಸಂಶೋಧಕ, ಕ್ಯಾಟಲಿನಾ ಟೋಮಾ, ಸಮೀಕ್ಷೆಯನ್ನ ನಡೆಸಿದ್ದು,  ಫೇಸ್‌ ಬುಕ್‌ ವ್ಯಕ್ತಿಯ ಸ್ವಾಭಿಮಾನ ಅಥವಾ ನಡವಳಿಕೆಯ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನ ಕಂಡುಕೊಳ್ಳಲು ’ಇಂಪ್ಲಿಸಿಟ್‌ ಅಸೋಸಿಯೇಶನ್‌ ಟೆಸ್ಟ್‌’ ಮೂಲಕ ಅಧ್ಯಯನ ನಡೆಸಿದ್ದರು.

ಅತಿಹೆಚ್ಚು ಫೇಸ್‌ ಬುಕ್‌ ಬಳಸುವ ವಿವಿಧ ವಯಸ್ಸಿನ ವ್ಯಕ್ತಿಗಳನ್ನು ಅಧ್ಯಯನಕ್ಕೊಳಪಡಿಸಿದ ಅಧ್ಯಯನ ತಂಡ, ಕೇವಲ ಒಳ್ಳೆಯ ವಿಷಯಗಳನ್ನ ಮಾತ್ರ ಪೋಸ್ಟ್‌ ಮಾಡುವ, ತಮ್ಮ ಸಂತಸದ ಸಂಗತಿಗಳನ್ನು ಮಾತ್ರ ಜಗತ್ತಿಗೆ ತೋರ್ಪಡಿಸಿ, ತಮ್ಮ ಸೌಖ್ಯವನ್ನ ಮಾತ್ರ ತನ್ನ ಹಿಂಬಾಲಕರಿಗೆ ತೋರ್ಪಡಿಸುವ ಫೇಸ್‌ ಬುಕ್‌ ಪ್ರೊಫೈಲ್‌ಗಳಿಂದ ಆತ್ಮಗೌರವ ಇಮ್ಮಡಿಯಾದಂತೆ ಭಾಸವಾದರೂ ಕೂಡ ಇದರ ಜತೆಜತೆಗೆ ಜೀವನದ ಮುಂದಿನ ಸಾಧನೆಗೆ ಬೇಕಾದ ಸ್ವಯಂಪ್ರೇರಣೆಯನ್ನ, ಸಮಯವನ್ನ ಕಳೆದುಕೊಳ್ಳುತ್ತಾ ಸಾಗುತ್ತೇವೆ ಎಂಬುದನ್ನ ಕಂಡುಕೊಂಡಿದ್ದಾರೆ.

ವೈಜ್ಞಾನಿಕ ರೀತಿಯಲ್ಲಿ, ಹಲವು ರೀತಿಯ ಟಾಸ್ಕ್‌ ಗಳ ಮೂಲಕ, ಖಾಸಗಿ ಸಮಾಲೋಚನೆಗಳ ಮೂಲಕ ಫೇಸ್‌ ಬುಕ್‌ ಬಳಕೆದಾರರ ಅಧ್ಯಯನ ನಡೆದಿದ್ದು ಫೇಸ್‌ ಬುಕ್‌ನಿಂದ ಮನಸ್ಸಿನ ಮೇಲಾಗುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನ ಪಟ್ಟಿಮಾಡಿದ್ದಾರೆ.

ಬೇರೆಯವರ ಸಂತಸದ ಕ್ಷಣಗಳನ್ನ ಮತ್ತೆ ಮತ್ತೆ ನೋಡಿ ತಮ್ಮನ್ನ ತುಲನೆ ಮಾಡಿಕೊಳ್ಳುವುದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಹಾಗೇ ವೈಯಕ್ತಿಕವಾಗಿ ಒತ್ತಡದಲ್ಲಿರುವ ಮಂದಿ ಕೂಡ ಫೇಸ್‌ ಬುಕ್‌ನ್ನ ಅತಿಯಾಗಿ ಬಳಸುತ್ತಾರಂತೆ.

ತಮ್ಮಲ್ಲಿರುವ ಧನಾತ್ಮಕತೆಯನ್ನ ಜನರಿಗೆ ಪರಿಚಯಿಸುವುದರಿಂದ ಸ್ವಾಭಿಮಾನ ಹೆಚ್ಚಬಲ್ಲದು ಎಂಬುದು ಸತ್ಯವಾದರೂ ಫೇಸ್‌ ಬುಕ್‌ ನಲ್ಲಿಯ ಪ್ರಚಾರದ ಪ್ರೀತಿ ಕೃತಕ ಭಾವನಾತ್ಮಕತೆಯ ಪ್ರದರ್ಶನವನ್ನ ಉತ್ತೇಜಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...