alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿ ಬಿಸಿ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ

2016_9image_20_08_345284886tea1-ll

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ಬಿಸಿ ಬಿಸಿ ಟೀ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ. ಭಯಾನಕ ರೋಗಗಳಿಗೆ ತುತ್ತಾಗಬೇಕಾಗುತ್ತದೆಯಂತೆ.

ಅಮೆರಿಕಾದಲ್ಲಿ ನಡೆದ ಸಂಶೋಧನೆಯಲ್ಲಿ ಈ ವಿಷಯ ತಿಳಿದುಬಂದಿದೆ. ಬಿಸಿ ಬಿಸಿ ಟೀ ಕುಡಿಯುವುದರಿಂದ ಗಂಟಲು ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಂತೆ. ಬಿಸಿ ಬಿಸಿ ಟೀ ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಸಂಶೋಧನೆ ಹೇಳಿದೆ.

ಬಿಸಿ ಬಿಸಿ ಟೀ ಕುಡಿಯುವ ಅಭ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ತಣ್ಣಗಿರುವ ಟೀ ಸೇವನೆಯನ್ನು ರೂಢಿ ಮಾಡಿಕೊಳ್ಳಿ. ಇರಾನ್ ಜನ ಹೆಚ್ಚಿನ ಪ್ರಮಾಣದಲ್ಲಿ ಟೀ ಸೇವನೆ ಮಾಡ್ತಾರೆ. ಅಲ್ಲಿ ಡ್ರಗ್ಸ್ ಬಳಕೆಯಿಲ್ಲ. ಆದ್ರೂ ಕ್ಯಾನ್ಸರ್ ಸಮಸ್ಯೆ ಕಂಡುಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...