alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾರ ಸೇವನೆ ನಂತ್ರ ಮಾಡಬೇಡಿ ಈ ಕೆಲಸ

ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಲಾಗ್ತಿದೆ. ಹೆಚ್ಚು ಪೌಷ್ಟಿಕಾಂಶವಿರುವ ಆಹಾರ ಸೇವನೆ ಮಾಡಲು ಜನರು ಮುಂದಾಗ್ತಿದ್ದಾರೆ. ಆದ್ರೆ ಆರೋಗ್ಯಕರ ಅಹಾರ ಸೇವನೆಯೊಂದೇ ಅಲ್ಲ ಆಹಾರ ಸೇವನೆ ವಿಧಾನ ಕೂಡ ತಿಳಿದಿರಬೇಕು. ಕೆಲವೊಮ್ಮೆ ಆಹಾರ ಸೇವನೆ ನಂತ್ರ ನಾವು ಮಾಡುವ ತಪ್ಪು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಸಿಗರೇಟು ಆರೋಗ್ಯಕ್ಕೆ ಹಾನಿಕರ. ಅದ್ರಲ್ಲೂ ಆಹಾರ ಸೇವನೆ ಮಾಡಿದ ತಕ್ಷಣ ಧೂಮಪಾನ ಮಾಡುವುದು ಮತ್ತಷ್ಟು ಅಪಾಯಕಾರಿ. ಆಹಾರ ಸೇವನೆ ಮಾಡಿದ ತಕ್ಷಣ ಧೂಮಪಾನ ಮಾಡಿದ್ರೆ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಆಹಾರ ಸೇವನೆ ಮಾಡಿದ ತಕ್ಷಣ ಹಣ್ಣು ತಿನ್ನುವುದು ಅನೇಕರ ಅಭ್ಯಾಸ. ಆದ್ರೆ ಇದು ತಪ್ಪು. ಆಹಾರ ಸೇವನೆ ಮಾಡಿದ ನಂತ್ರ ಹಣ್ಣು ತಿಂದ್ರೆ ಹಣ್ಣಿನ ಪೌಷ್ಠಿಕಾಂಶ ನಮ್ಮ ದೇಹವನ್ನು ಸರಿಯಾಗಿ ತಲುಪುವುದಿಲ್ಲ. ಆಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ಹಣ್ಣು ತಿನ್ನಿ.

ಆಹಾರ ಸೇವನೆ ಮಾಡಿದ ತಕ್ಷಣ ಸ್ನಾನ ಮಾಡುವ ತಪ್ಪು ಮಾಡಬೇಡಿ. ಇದು ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಕ್ತ ಪರಿಚಲನೆ ಹೆಚ್ಚಾಗಿ ಜೀರ್ಣಕ್ರಿಯೆ ಮೇಲೆ ಅಡ್ಡಪರಿಣಾಮವುಂಟಾಗುತ್ತದೆ.

ಆಹಾರದ ಜೊತೆ ಟೀ ಕುಡಿಯುವ ಅಭ್ಯಾಸ ಅನೇಕರಿಗಿದೆ. ಚಹಾ ಎಲೆಯಲ್ಲಿ ಆಮ್ಲೀಯತೆ ಹೆಚ್ಚಿರುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆಹಾರ ಸೇವನೆ ಮಾಡಿದ 2 ಗಂಟೆ ನಂತ್ರ ಟೀ ಕುಡಿಯಿರಿ.

ಆಹಾರ ಸೇವನೆ ನಂತ್ರ ನಿದ್ರೆ ಬಂದಂತಾಗುವುದು ಮಾಮೂಲಿ. ಆದ್ರೆ ನಿದ್ರೆ ಮಾಡಬಾರದು. ಆಹಾರ ಜೀರ್ಣವಾಗಲು ಕೆಲ ಸಮಯ ಬೇಕು. ಆಹಾರ ತಿಂದ ತಕ್ಷಣ ಮಲಗಿದ್ರೆ ಗ್ಯಾಸ್, ಕರುಳಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...