alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯ ಬಡಿತ ನಿಂತು ಗಂಟೆ ಕಳೆದಿದ್ರೂ ಬದುಕುಳಿದ ಯುವಕ

ಅಲಿಗಢ ಮೂಲದ ಎಂಜಿನಿಯರ್, 22 ವರ್ಷದ ಆಸಿಫ್ ಖಾನ್ ಗೆ ಮರುಜನ್ಮ ಸಿಕ್ಕಿದೆ. 12 ದಿನಗಳ ಹಿಂದೆ ಆಸಿಫ್ ಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಸುಮಾರು 1 ಗಂಟೆ ಕಾಲ ಆತನ ಹೃದಯ ಬಡಿತವೇ ನಿಂತುಹೋಗಿತ್ತು. ಆದ್ರೆ ಎದೆನೋವು ಅಂತಾ ಅಪೋಲೋ ಆಸ್ಪತ್ರೆಗೆ ಬಂದಿದ್ದಾಗ್ಲೇ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು ಅವನ ಅದೃಷ್ಟ.

ವೈದ್ಯರು ಪರೀಕ್ಷಿಸುತ್ತಿದ್ದಾಗ್ಲೇ ಆತ ಕುಸಿದು ಬಿದ್ದಿದ್ದ. ಸುಮಾರು ಒಂದು ಗಂಟೆ ಕಾಲ ಹೃದಯ ಬಡಿತವೇ ಇಲ್ಲದಿದ್ರೂ ವೈದ್ಯರು ಅವನನ್ನು ಬದುಕಿಸಿದ್ದಾರೆ. ಆಸಿಫ್ ನ ರಕ್ತನಾಳದಲ್ಲಿ ಬ್ಲಡ್ ಕ್ಲಾಟ್ ಆಗಿತ್ತು. ಆ್ಯಂಜಿಯೋಗ್ರಾಮ್ ಮಾಡಿದ ವೈದ್ಯರು ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆದು ಹಾಕಿದ್ದಾರೆ.

ಈ ಸಂದರ್ಭದಲ್ಲಿ ಆಸಿಫ್ ಗೆ ಎರಡನೇ ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಆದ್ರೆ ವೈದ್ಯರ ಸಮಯೋಚಿತ ಚಿಕಿತ್ಸೆಯಿಂದಾಗಿ ಆತನಿಗೆ ಮರುಜೀವ ಸಿಕ್ಕಿದೆ. ಇದೀಗ ಸಂಪೂರ್ಣ ಗುಣಮುಖನಾಗಿ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...