alex Certify
ಕನ್ನಡ ದುನಿಯಾ       Mobile App
       

Kannada Duniya

ಮೂಢನಂಬಿಕೆ ತಂದಿತ್ತು ಪ್ರಾಣಕ್ಕೇ ಸಂಚಕಾರ

tumour

ಕೋಲ್ಕತ್ತಾದಲ್ಲಿ ಜನರ ಮೂಢನಂಬಿಕೆ ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿತ್ತು. ಆದ್ರೆ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಆತ ಬಚಾವ್ ಆಗಿದ್ದಾನೆ. 49 ವರ್ಷದ ಶ್ಯಾಮ್ ಲಾಲ್ ತಿರ್ಕೆ ಎಂಬಾತ ಊಟವಾದ ತಕ್ಷಣ ವಾಂತಿ ಮಾಡಿಕೊಳ್ತಿದ್ದ. ಗ್ರಾಮಸ್ಥರೆಲ್ಲ ಇದು ದೆವ್ವದ ಕಾಟ ಅಂತಾನೇ ನಂಬಿಸಿಬಿಟ್ಟಿದ್ರು.

ಮನೆಯವರು ಕೂಡ ಗ್ರಾಮಸ್ಥರ ಮಾತನ್ನು ನಂಬಿ ಶ್ಯಾಮಲಾಲ್ ನನ್ನು ಆಸ್ಪತ್ರೆ ಬದಲು ಮಾಂತ್ರಿಕರ ಬಳಿಗೆ ಕರೆದೊಯ್ದಿದ್ರು. ಆದ್ರೆ ಅಲ್ಲೂ ಪರಿಹಾರ ಸಿಗಲಿಲ್ಲ. ಹೊಟ್ಟೆಯಲ್ಲಿ ನೋವು ತಡೆಯಲಾಗದೆ ಶ್ಯಾಮ್ ಲಾಲ್ ಒದ್ದಾಡುತ್ತಿದ್ದ. ಗ್ರಾಮಸ್ಥರೆದುರು ಮುಜುಗರ ಆಗಬಾರದು ಅಂತಾ ಮನೆಯವರು ಅವನನ್ನು ಕೋಣೆಯೊಳಗೆ ಕೂಡಿಟ್ಟಿದ್ರು.

ಸುಮಾರು ಒಂದು ವರ್ಷದವರೆಗೂ ಆತ ನರಕಯಾತನೆ ಅನುಭವಿಸಿದ್ದಾನೆ. ನಂತರ ನೆರೆಹೊರೆಯವರ ಸಲಹೆ ಮೇರೆಗೆ ಆಸ್ಪತ್ರೆಗೆ ತೆರಳಿ ಎಕ್ಸ್ ರೇ ಮಾಡಿಸಿದ್ದ. ಆತನ ಹೊಟ್ಟೆಯಲ್ಲಿ ದೊಡ್ಡದೊಂದು ಗಡ್ಡೆ ಬೆಳೆದಿತ್ತು. ಎಕ್ಸ್ ರೇಯಲ್ಲಿ ಅದು ಬೆಳಕಿಗೆ ಬಂದಿದೆ.

ಇದೊಂದು ಅಪರೂಪದ ಕ್ಯಾನ್ಸರ್, ಕಿಡ್ನಿ, ಮೇದೋಜೀರಕ ಮತ್ತು ಮೂತ್ರಕೋಶದ ಬಳಿ ಕ್ಯಾನ್ಸರ್ ಗಡ್ಡೆ ಬೆಳೆಯುತ್ತದೆ. ಕೊನೆಗೂ ವೈದ್ಯರು ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ. ಮೂಢನಂಬಿಕೆಯಿಂದ ಪ್ರಾಣ ಕಳೆದುಕೊಳ್ತಾ ಇದ್ದ ಶ್ಯಾಮಲಾಲ್ ಬದುಕಿ ಉಳಿದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...